ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ವೀರಯೋಧ ಜುಮ್ಮಣ್ಣ ಪೂಜಾರಿ ಮುತ್ಯಾನ ಸ್ಮರಿಸುವ ಹಬ್ಬ ಇದಾಗಿದೆ.
ಇನ್ನು ಕವಡಿಮಟ್ಟಿ ಗ್ರಾಮದಲ್ಲಿ ವಾಸವಾಗಿದ್ದ ಜುಮಣ್ಣ ಪೂಜಾರಿ ಒಬ್ಬ ಸಾಮಾನ್ಯ ರೈತ ಹಾಗೂ ದೈವ ಭಕ್ತ, ಕವಡಿಮಟ್ಟಿ ಗ್ರಾಮದ ಹಣಮಂತ ದೇವರ ಪೂಜಾರಿ ಯಾಗಿದ್ದವನು. ಇನ್ನು ಆಗಿನ ಕಾಲದಲ್ಲಿ ಸರ್ಕಾರದವರು ಹನುಮಂತ ದೇವರ ಪೂಜೆ ಮಾಡುವ ಸಲುವಾಗಿ ಸ್ವಲ್ಪ ಪ್ರಮಾಣದ ಭೂಮಿಯನ್ನು ಧಾನವಾಗಿ ನೀಡಿದ್ದರು.( ಅದಕ್ಕೆ ಇಂದಿಗೂ ಕೂಡ ಮಾನೇದ ಹೊಲ ಎಂದು ಹೇಳುತ್ತಾರೆ) , ನಂತರ ಈ ಪ್ರದೇಶವು ಬ್ರಿಟಿಷರ ಆಡಳಿತಕ್ಕೆ ಒಳಪಡುತ್ತದೆ. ಆಗ ಬ್ರಿಟಿಷರು ಆ ಭೂವಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
ಜುಮ್ಮಣ್ಣ ಪೂಜಾರಿವು ಬ್ರಿಟಿಷರಿಗೆ ಸಿಂಹಸ್ವಪ್ನವಾಗುತ್ತಾನೆ ಬ್ರಿಟಿಷರು ಎಷ್ಟೇ ಪ್ರಯತ್ನ ಪಟ್ಟರು ಸರಕಾರ ನೀಡಿದ ಭೂವಿಯನ್ನು ಪ್ರಾಣ ಕೋಟ್ಟರು ಭೂವಿಯನ್ನು ನೀಡದಿರಲೂ ನಿರ್ಧರಿಸುತ್ತಾನೆ.
ಒಂದು ದಿನ ಜುಮ್ಮಣ್ಣ ಪೂಜಾರಿ ಮಧ್ಯರಾತ್ರಿ ತನ್ನ ಎತ್ತಿನಗಾಡಿಯೊಂದಿಗೆ ಹೊಲಕ್ಕೆ ಹೊಗುತ್ತಾನೆ. ಈ ಸುದ್ದಿ ಬ್ರಿಟಿಷರಿಗೆ ತಿಳಿಯುತ್ತದೆ ಆಗ ಅವರು ಕತ್ತಿ ಮತ್ತು ಖಡ್ಗದೊಂದಿಗೆ ಸಿದ್ದರಾಗಿ ಬರುತ್ತಾರೆ, ಮುಗ್ಧ ಜುಮ್ಮಣ್ಣ ಪೂಜಾರಿಯ ಹತ್ತಿರ ಯಾವುದೇ ಆಯುಧಗಳು ಇರುವದಿಲ್ಲ ಆಗ ಈಸು ಮತ್ತು ಬಡಿಗೆಯೊಂದಿಗೆ ಬ್ರಿಟಿಷರೊಂದಿಗೆ ಹೊರಾಡುತ್ತಾನೆ.
ಜುಮ್ಮಣ್ಣ ಪೂಜಾರಿವು ವಿರಾವೇಷದೊಂದಿಗೆ ಹೊರಾಡುತ್ತಿರುವಾಗ ಬ್ರಿಟಿಷರು ಖಡ್ಗದಿಂದ ಜುಮ್ಮಣ್ಣನ ದೇಹದಿಂದ ರುಂಡವನ್ನು ಬೆರ್ಪಡಿಸಿ ಓಡಿ ಹೊಗುತ್ತಾರೆ .
ಮರುದಿನ ಮುಂಜಾನೆ ಜುಮ್ಮಣ್ಣ ಪೂಜಾರಿಯ ಅಕ್ಕ ಹೊಲಕ್ಕೆ ಬುತ್ತಿ ತಗೆದುಕೊಂಡು ಬರುತ್ತಾಳೆ ದೇಹದಿಂದ ಬೆರ್ಪಡಿಸಿದ ರುಂಡವು ಮಾತನಾಡಿ ನನ್ನ ದೇಹವನ್ನು ನನ್ನ ಮನೆಯ ಬಲಬಾಗದಲ್ಲಿ ಸಮಾಧಿ ಮಾಡಿ ಬ್ರಿಟಿಷರೊಂದಿಗೆ ಹೊರಾಡಿದ ಈ ಹೊರಾಟವನ್ನು ಈರಗುಡಿ ಹಬ್ಬವಾಗಿ (ಬಡಗಿ ಹಬ್ಬ) ಪ್ರತಿ ಮೂರುವರ್ಷಕ್ಕೊಮ್ಮೆ ಆಚರಿಸಿ ಎಂದು ಜುಮ್ಮಣ್ಣ ಪೂಜಾರಿ ಪ್ರಾಣ ಬಿಡುತ್ತಾರೆ.
ಈ ಬಲಿದಾನದ ದಿನದ ಸ್ಮರಣೆಗಾಗಿ ಪ್ರತಿ ಮೂರುವರ್ಷಕ್ಕೊಮ್ಮೆ ಕವಡಿಮಟ್ಟಿ ಗ್ರಾಮದಲ್ಲಿ ಜುಮ್ಮಣ್ಣ ಪೂಜಾರಿ ವಂಶಸ್ಥರಾದ ಪೂಜಾರಿ ಮನೆತನದವರು ಈರಗುಡಿ ಹಬ್ಬವನ್ನು (ಬಡಗಿ ಹಬ್ಬ) ಆಚರಿಸುತ್ತಾರೆ.