ಬೆಂಗಳೂರು:- ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ವಾರ್ತಾಜಾಲ ಪತ್ರಿಕೆ ಸಂಪಾದಕ ಬೆ. ಕೆ .ಪ್ರಸನ್ನ ಅವರು ಸೇರಿದಂತೆ 18 ಜನ ಸಾಧಕರು ವಿಶ್ವ ದಾಖಲೆಗೆ ಸೇರ್ಪಡೆಯಾದರು. ಹಾಗೂ 50 ಜನರು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಕರ್ನಾಟಕ ಯೂತ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಸೇವಾ ಯೋಧರತ್ನ ರಾಜ್ಯ ಪ್ರಶಸ್ತಿ ಹಾಗೂ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ
ಚಲನಚಿತ್ರ ನಿರ್ಮಾಪಕರಾದ ಡಾ.ಗಂಡಸಿ ಸದಾನಂದ ಸ್ವಾಮಿ, ಸಂಸ್ಥೆಯ ಪದಾಧಿಕಾರಿಗಳಾದ ಸಂಸ್ಥಾಪಕ ಅಧ್ಯಕ್ಷರಾದ ಡಾ.ಎ.ಪಿ. ಕರಾಟೆ ಶ್ರೀನಾಥ್ , ಪದ್ಮಶ್ರೀ ಪುರಸ್ಕೃತ ಡಾ. ಕೆ ವೈ. ವೆಂಕಟೇಶ್ , ರಾಷ್ಟ್ರೀಯ ಸಸ್ಯಹಾರಿ ದೇಹಧಾರ್ಢ್ಯ ಪಟು ಡಾ. ಬಿ ಕೆ ಪ್ರಕಾಶ್ ಭಾರದ್ವಾಜ್ , ಕಿರು ತಾರೆ ಚೈತ್ರ , ಪಾರ್ಥ , ಎಸ್.ಗೀತಾ ಚಂದ್ರಶೇಖರ್. ಹಿನ್ನೆಲೆ ಗಾಯಕ ಡಾ. ನಂದನ್, ಡಾ. ಪ್ರೇಮಾ. , ಪ್ರಕಾಶ್ ಕುಂಬ್ಳೆ ಉಪಸ್ಥಿತರಿದ್ದರು.