ಪೌರಕಾರ್ಮಿಕರಿಗೆ ಉಡುಗೊರೆ ನೀಡುವ ಮೂಲಕ ಸರಳವಾಗಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡ ಡಾ.ಸ್ವಾಮಿ

Bhima Samskruthi
By -
0
ಬೆಂಗಳೂರು : ಇತ್ತಿಚಿಗೆ ಬೆಂಗಳೂರು ನಗರದ ರಾಜಾಜಿನಗರದಲ್ಲಿ ಉಧ್ಯಮಿ ಹಾಗೂ ಸಮಾಜ ಸೇವಕ ಡಾ||ಮನ್ಮತಯ್ಯ ಸ್ವಾಮಿ ಅವರು ತಮ್ಮ ೩೯ ನೇ ಹುಟ್ಟು ಹಬ್ಬವನ್ನು ತಮ್ಮ ಅಭಿಮಾನಿಗಳು ಹಾಗೂ ಕುಟುಂಬದ ಸದಸ್ಯರೊಂದಿಗೆ ಸಂಭ್ರಮಿಸಿದರು.
 ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ತಮ್ಮ ನೂತನ ಕಚೇರಿಯ ಉದ್ಘಾಟನೆ ಹಾಗೂ ಪೌರ ಕಾರ್ಮಿಕರಿಗೆ ಉಡುಗೊರೆ ಯೊಂದಿಗೆ ಸರಳವಾಗಿ ಜನ್ಮದಿನವನ್ನು ಆಚರಣೆ ಮಾಡಿಕೊಂಡುರು, ಈ ಕಾರ್ಯಕ್ರಮಕ್ಕೆ ಶ್ರೀ ಡಾ.ವಿನಯ್ ಗುರೂಜಿ ಹಾಗೂ ಶ್ರೀ ಮ.ನಿ.ಪ್ರ ಶಿವಾನುಭವ ಚರಮೂರ್ತಿ ಶಿವರುದ್ರಪ  ಮಹಾಸ್ವಾಮೀಜಿಗಳು ಮತ್ತು ಗೋಸಾಯಿ ಮಠದ ಶ್ರೀ ಮಂಜುನಾಥ ಸ್ವಾಮೀಜಿಯವರು ಆಗಮಿಸಿ ಡಾ.ಮನ್ಮತಯ್ಯ ಅವರಿಗೆ ಆಶಿರ್ವಾದ ನೀಡಿದರು,
ಇದೆ ಸಂದರ್ಭದಲ್ಲಿ ಗ್ಲೋಬಲ್ ಉಮೆನ್ ರೈಸ್ ಫೌಂಡೆಶನ್ ಸಂಸ್ಥೆ ಲೋಕಾರ್ಪಣೆ ಮಾಡುವುದರ ಜೊತೆಗೆ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ವಿಶೇಷ ಕಾಳಜಿಯ ಹೊಣೆ ಹೊತ್ತ ಡಾ.ಮನ್ಮತಯ್ಯ ಸ್ವಾಮಿ ಅವರಿಗೆ ಹರ ಚರ ಶ್ರೀಗಳು ಆಶಿರ್ವಾದ ಮಾಡಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಡಾ.ವಿನಯ್ ಗುರೂಜಿ ನಮ್ಮ ಮನಸ್ಸು ಪರಿಶುದ್ದವಾಗಿದ್ದರೆ ಸಡತೆಯೂ ಶುದ್ದವಾಗಿರುತ್ತದೆ , ಅಂತಹ ಸಾಲಿನಲ್ಲಿ ಡಾ.ಮನ್ಮತಯ್ಯ ಅವರು ನಡೆಯುತ್ತಿದ್ದಾರೆ ಸಮಾಜದಲ್ಲಿನ ಅನೇಕ ಬದಲಾವಣೆಗಳನ್ನು ಮಾಡಬೇಕಾದರೆ ಮನುಷ್ಯ ತಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬೇಕು ಅಂತಹ ನಿಟ್ಟಿನಲ್ಲಿ ಇವರು ನಡೆಯುತ್ತಿದ್ದಾರೆ ಇವರಿಗೆ ಭಗವಂತನ ಕೃಪ ಆಶೀರ್ವಾದ ಕೂಡ ಇರುತ್ತದೆ ನಾವು ಮಾಡುವ ಒಳ್ಳೆಯ ಕೆಲಸಗಳು ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂದು ಈ ಸಂದರ್ಭದಲ್ಲಿ ಶ್ಲಾಘನೆ ವ್ಯಕ್ತಪಡಿಸಿದರು, 
ಈ ಸಂದರ್ಭದಲ್ಲಿ ಸಮಾಜ ಸೇವಕ ಮಿಥುನ್ ಹುಗ್ಗಿ , ಹಾಗೂ ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷರಾದ ಮೋಹನ್ ಗೌಡ ಪಾಟೀಲ್ ಹಾಗೂ ಡಾ. ಮನ್ಮತಯ್ಯ ಸ್ವಾಮಿ ಅವರ ಸಹೋದರರು ಮತ್ತು ಅಭಿಮಾನಿಗಳು ಉಪಸ್ಥಿತಿ ಇದ್ದರು.
Tags:

Post a Comment

0Comments

Post a Comment (0)