ಕಿತ್ತೂರು ಕ್ರಾಂತಿಯಲ್ಲಿ "ಭೀಮ" ಸಮಾಗಮ !

Bhima Samskruthi
By -
0
ಕಿತ್ತೂರು ಕ್ರಾಂತಿಯಲ್ಲಿ "ಭೀಮ" ಸಮಾಗಮ 
ಬೆಳಗಾವಿ: ಜಿಲ್ಲೆಯ  ಯರಗಟ್ಟಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭೀಮ ಸಂಸ್ಕೃತಿ ಪತ್ರಿಕೆಯ ಪತ್ರಕರ್ತರ ಸಭೆಯಲ್ಲಿ ನೂತನವಾಗಿ ಆಗಮಿಸಿದ ಯರಗಟ್ಟಿ ತಾಲೂಕಿನ ಪತ್ರಕರ್ತರಾದ ಚನ್ನಪ್ಪ ಸೋಮಪ್ಪ ಪಣದಿ ಅವರನ್ನು ಸ್ವಾಗತಿಸಲಾಯಿತು. ಹಾಗೂ ಜಿಲ್ಲೆಯ  ಇನ್ನುಳಿದ ತಾಲೂಕುಗಳ ಪತ್ರಕರ್ತರನ್ನು ಈ ಸಂದರ್ಭದಲ್ಲಿ ಸ್ವಾಗತಿಸಿ ಪತ್ರಿಕೆಯ ಅಭಿವೃದ್ದಿ ದೃಷ್ಟಿಕೋನದಿಂದ ಪತ್ರಿಕೆಯ ಬೆಳೆಸುವುದರ ವಿಷಯದ ಅಂಗವಾಗಿ ಚರ್ಚಿಸಲಾಯಿತು. ನಂತರ ಯರಗಟ್ಟಿ ಪಟ್ಟಣದ ಶ್ರೀ ರಾಜರಾಜೇಶ್ವರಿ ಆಶ್ರಮಕ್ಕೆ ಭೇಟಿ ನೀಡಿ ದೇವಿ ಆಶೀರ್ವಾದ ಪಡೆದುಕೊಂಡು ಶ್ರೀ ಗಣಪತಿ ಮಹಾರಾಜರ ಅಮೃತ ಹಸ್ತದಿಂದ ಪತ್ರಿಕೆಯನ್ನು ಹಂಚಲಾಯಿತು. ಈ ಸಂದರ್ಭದಲ್ಲಿ ಭೀಮ ಸಂಸ್ಕೃತಿಯ  ಉಪಸಂಪಾದಕರಾದ ಮಹಾಂತೇಶ್ ಹಿರೇಮಠ್ ಹಾಗೂ ಬೆಳಗಾವಿ ಜಿಲ್ಲಾ ವಿಶೇಷ ವರದಿಗಾರರಾದ ಗಣೇಶ ನಲವಡೆ. ಮತ್ತು ಗೋಕಾಕ್,  ಮೂಡಲಗಿ,  ಹುಕ್ಕೇರಿ,  ಸವದತ್ತಿ, ಸೇರಿದಂತೆ ತಾಲೂಕಿನ ವರದಿಗಾರರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
Tags:

Post a Comment

0Comments

Post a Comment (0)