ಮುದ್ದೇಬಿಹಾಳ: ಪಟ್ಟಣದ ದಲಿತ ಸಾಹಿತಗಳಾದ ಶಿವಪುತ್ರ ಅಜಮನಿ ಇವರಿಗೆ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು (ರ)ಬೆಂಗಳೂರು. ಕನ್ನಡ ರಾಜ್ಯೋತ್ಸವ ನುಡಿ ಸಂಭ್ರಮ 2024 ರಾಜ್ಯ ಮಟ್ಟದ ಕವಿಪೀಠ ಮಹಾಸ ಮ್ಮೇಳನದ ವೇದಿಕೆಯಲ್ಲಿ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದು ಶಿವಪುತ್ರ ಅಜಮನಿ ಇವರು ಬರೆದ ಅವರ ಆತ್ಮಕಥೆ "ಹೊಲಗೇರಿಯಿಂದ ಹೊರದೇಶಕ್ಕ'' ಕೃತಿಗೆ ನಾಡಿನ ಹೆಸರಾಂತ ಬಂಡಾಯ ಸಾಹಿತಿಗಳಾದ ಡಾ. ಸಿದ್ಧಲಿಂಗಯ್ಯ ಸಾಹಿತ್ಯ ಭೂಷಣ ಪ್ರಶಸ್ತಿಯನ್ನು ಪ್ರಕಟಿಸಿದ್ದು ಇದೇ ರವಿವಾರ 2024ರ ನ.24ರಂದು ಧಾರವಾಡದ ಸೃಜನಾ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಶಿವಪುತ್ರ ಅಜಮನಿಯವರು ಹಲವು ಕವನ ಸಂಕಲನ, ಹನಿಗವನ ಸಂಕಲನ ಬರೆದು ಸಾಹಿತ್ಯದ ಸಾರಸ್ವತ ಲೋಕದಲ್ಲಿ ಗುರುತಿಸಿಕೊಂಡವರು. ಅವರ ಸಾಧನೆಗೆ ಅಖಿಲ ಭಾರತ ದಲಿತ ಸಾಹಿತ್ಯ ಅಕಾಡೆಮಿ ದೆಹಲಿಯಿಂದ ಡಾ.ಬಾಬಾಸಾಹೇಬ ಅಂಬೇಡ್ಕರ ನ್ಯಾಶನಲ್ ಫೆಲೋಶಿಪ್ ಅವಾರ್ಡ್ ಅನೇಕ ಸಂಘಸಂಸ್ಥೆಗಳಿಂದ ಹಲವು ಪ್ರಶಸ್ತಿಗಳೀಗೆ ಭಾಜನರಾದ ಶಿವಪುತ್ರ ಇವರಿಗೆ ಡಾ. ಸಿದ್ದಲಿಂಗಯ್ಯ ಪ್ರಶಸ್ತಿ ಲಭಿಸಿರುವದಕ್ಕೆ ಸಾಹಿತಿಗಳು, ಕಲಾವಿದರು, ಜನ ಪ್ರತಿನಿಧಿಗಳು, ಹರ್ಷ ವ್ಯಕ್ತಪಡಿಸಿದ್ದಾರೆ.