VIJAYAPURA ದಿಂದ ಬೆಂಗಳೂರಿಗೆ ವಿಶೇಷ ರೈಲು ಮಾಹಿತಿ ಇಲ್ಲಿದೆ ನೋಡಿ !

Bhima Samskruthi
By -

ಗುಮ್ಮಟ ನಗರಿ ವಿಜಯಪುರ ನಗರದಿಂದ ಬೆಂಗಳೂರಿಗೆ ಪ್ರತಿನಿತ್ಯ ಮೂರು ರೈಲುಗಳು ಸಂಚರಿಸುತ್ತವೆ. ಮೂರು ರೈಲುಗಳ ಸಮಯ ಸಹ ಬೇರೆ ಬೇರೆಯಾಗಿದೆ. ಆದ್ರೆ ವಿಶೇಷ ಏನಂದ್ರೆ ಮೂರು ರೈಲುಗಳು ಬೆಂಗಳೂರು ತಲುಪುವ ಮಾರ್ಗ ಬೇರೆ ಬೇರೆಯಾಗಿದೆ. ವಿಜಯಪುರದಿಂದ ಗೋಲಗುಂಬಜ್ ಎಕ್ಸ್‌ಪ್ರೆಸ್, ಬಸವ ಎಕ್ಸ್‌ಪ್ರೆಸ್ ಮತ್ತು ವಿಜಯಪುರ-ಯಶವಂತಪುರ ಎಕ್ಸ್‌ಪ್ರೆಸ್ ಎಂಬ ಮೂರು ರೈಲುಗಳು ಪ್ರತಿನಿತ್ಯ ಬೆಂಗಳೂರಿನತ್ತ ಚಲಿಸುತ್ತವೆ.

ಈ ಮೂರು ರೈಲು ಹೊರತುಪಡಿಸಿ ಬಿಕಾನೇರ್-ಯಶವಂತಪುರ ಎಕ್ಸ್‌ಪ್ರೆಸ್ ವಾರದಲ್ಲಿ ಎರಡು ದಿನ ವಿಜಯಪುರದಿಂದ ಬೆಂಗಳೂರಿಗೆ ಚಲಿಸುತ್ತಿದೆ. ಆ ಮೂರು ಪ್ರತ್ಯೇಕ ರೈಲು ಮಾರ್ಗ ಯಾವುದು ಎಂಬುದರ ಮಾಹಿತಿ ಹಾಗೂ ಪ್ರಯಾಣದ ಅವಧಿ ಎಷ್ಟಿದೆ ಎಂಬುದರ ಮಾಹಿತಿ ನೀಡುತ್ತಿದ್ದೇವೆ.

ರೈಲು ಸಂಖ್ಯೆ: 16536 ಗೋಲಗುಂಬಜ್ ಎಕ್ಸ್‌ಪ್ರೆಸ್ GOLGUMBAZ EXP
ಈ ರೈಲು ಪಂಡರಪುರದಿಂದ ತನ್ನ ಪ್ರಯಾಣ ಆರಂಭಿಸಿ ಮೈಸೂರು ಜಂಕ್ಷನ್‌ನಲ್ಲಿ ಕೊನೆ ಮಾಡುತ್ತದೆ. ವಾರದ ಎಲ್ಲಾ ದಿನವೂ ಚಲಿಸುವ ಗೋಲಗುಂಬಜ್ ಎಕ್ಸ್‌ಪ್ರೆಸ್ ಬರೋಬ್ಬರಿ 1,096 ಕಿಮೀ ದೂರ ಪ್ರಯಾಣ ಮಾಡುತ್ತದೆ. ಪಂಡರಪುರದಿಂದ ಸೋಲ್ಹಾಪುರ ಮಾರ್ಗವಾಗಿ ಬರುವ ಈ ರೈಲು ಸಂಜೆ 5 ಗಂಟೆ 45 ನಿಮಿಷಕ್ಕೆ ವಿಜಯಪುರ ನಿಲ್ದಾಣಕ್ಕೆ ಬರುತ್ತದೆ.

ಸಂಜೆ 5.55ಕ್ಕೆ ವಿಜಯಪುರ ನಿಲ್ದಾಣದಿಂದ ಹೊರಡುವ ಈ ರೈಲು, ಬಾಗಲಕೋಟೆ, ಬದಾಮಿ, ಗದಗ ಜಂಕ್ಷನ್, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಚಿಕ್ಕಜಾಜೂರು ಜಂಕ್ಷನ್, ಬಿರೂರು ಜಂಕ್ಷನ್, ಅರಸಿಕೆರೆ ಜಂಕ್ಷನ್, ತುಮಕೂರು ಮಾರ್ಗವಾಗಿ ಬೆಂಗಳೂರು ತಲುಪುತ್ತದೆ. ನಂತರ ರಾಮನಗರ, ಮಂಡ್ಯ ಮಾರ್ಗವಾಗಿ ಮೈಸೂರು ತಲುಪಿ ತನ್ನ ಪ್ರಯಾಣವನ್ನು ಮುಕ್ತಾಯಯಗೊಳಿಸುತ್ತದೆ. ವಿಜಯಪುರದಿಂದ ಬೆಂಗಳೂರು ತಲುಪಲು ಗೋಲಗುಂಬಜ್ ಎಕ್ಸ್‌ಪ್ರೆಸ್ 13 ಗಂಟೆ ತೆಗೆದುಕೊಳ್ಳುತ್ತದೆ.

ರೈಲು ಸಂಖ್ಯೆ: 06546 ವಿಜಯಪುರ-ಯಶವಂತಪುರ ಎಕ್ಸ್‌ಪ್ರೆಸ್ BJP YPR EXP
ಈ ರೈಲು ವಿಜಯಪುರದಿಂದಲೇ ತನ್ನ ಪ್ರಯಾಣವನ್ನು ಆರಂಭಿಸಿ ಯಶವಂತಪುರ ನಿಲ್ದಾಣದಲ್ಲಿ ಕೊನೆಗೊಳಿಸುತ್ತದೆ. ವಾರದ ಎಲ್ಲಾ ದಿನವೂ ಚಲಿಸುವ ವಿಜಯಪುರ-ಯಶವಂತಪುರ ಎಕ್ಸ್‌ಪ್ರೆಸ್ ಬರೋಬ್ಬರಿ 740 ಕಿಮೀ ದೂರ ಪ್ರಯಾಣ ಮಾಡುತ್ತದೆ. ಗದಗ ಜಂಕ್ಷನ್‌ನಿಂದ ತನ್ನ ಮಾರ್ಗವನ್ನು ಈ ರೈಲು ಬದಲಿಸುತ್ತದೆ.ಮಧ್ಯಾಹ್ನ 2 ಗಂಟೆಗೆ ವಿಜಯಪುರ ನಿಲ್ದಾಣದಿಂದ ಹೊರಡುವ ಈ ರೈಲು, ಬಾಗಲಕೋಟೆ, ಬದಾಮಿ, ಗದಗ ಜಂಕ್ಷನ್, ಕೊಪ್ಪಳ, ಹೊಸಪೇಟೆ ಜಂಕ್ಷನ್, ಕೊಟ್ಟರು, ಹರಪನಹಳ್ಳಿ, ದಾವಣಗೆರೆ, ಚಿಕ್ಕಜಾಜೂರು ಜಂಕ್ಷನ್, ಹೊಸದುರ್ಗ ರೋಡ್, ಕಡೂರು, ಅರಸಿಕೆರೆ ಜಂಕ್ಷನ್, ತುಮಕೂರು ಮಾರ್ಗವಾಗಿ ಯಶವಂತಪುರ ಜಂಕ್ಷನ್ ತಲುಪುತ್ತದೆ. ವಿಜಯಪುರದಿಂದ ಯಶವಂತಪುರ ತಲುಪಲು ಈ ರೈಲು 15 ಗಂಟೆ ಸಮಯ ತೆಗೆದುಕೊಳ್ಳುತ್ತದೆ.

ರೈಲು ಸಂಖ್ಯೆ: 17308 ಬಸವ ಎಕ್ಸ್‌ಪ್ರೆಸ್ BASAVA EXPRESS
ಮೇಲಿನ ಎರಡು ರೈಲುಗಳಿಗೆ ತದ್ವಿರುದ್ಧವಾಗಿ ಬಸವ ಎಕ್ಸ್‌ಪ್ರೆಸ್ ಭಿನ್ನ ಮಾರ್ಗದಲ್ಲಿ ಚಲಿಸುತ್ತದೆ. ಮಧ್ಯಾಹ್ನ 04.25ಕ್ಕೆ ವಿಜಯಪುರ ನಿಲ್ದಾಣ ತಲುಪುವ ಈ ರೈಲು 04.30ಕ್ಕೆ ಇಲ್ಲಿಂದ ಹೊರಡುತ್ತದೆ. ವಿಜಯಪುರದಿಂದ ಹೊರಡುವ ರೈಲು ಸೋಲ್ಹಾಪುರ ಜಂಕ್ಷನ್, ಕಲಬುರಗಿ, ವಾಡಿ, ಯಾದಗಿರಿ, ರಾಯಚೂರು ಜಂಕ್ಷನ್, ಮಂತ್ರಾಲಯಂ ರೋಡ್, ಗುಂಟ್ಕಲ್ ಜಂಕ್ಷನ್, ಅನಂತಪುರ, ಹಿಂದೂಪುರ, ಗೌರಿಬಿದನೂರು, ದೊಡ್ಡಬಳ್ಳಾಪುರ, ಯಲಹಂಕ ಜಂಕ್ಷನ್, ಯಶವಂತಪುರ ಮಾರ್ಗವಾಗಿ ಬೆಂಗಳೂರು ತಲುಪುತ್ತದೆ.

ನಂತರ ರಾಮನಗರ, ಮಂಡ್ಯ ಮಾರ್ಗವಾಗಿ ಮೈಸೂರು ತಲುಪಿ ತನ್ನ ಪ್ರಯಾಣವನ್ನು ಮುಕ್ತಾಯಯಗೊಳಿಸುತ್ತದೆ. ಬಾಗಲಕೋಟೆಯಿಂದ ಪ್ರಯಾಣ ಆರಂಭಿಸಿ ಮೈಸೂರಿನಲ್ಲಿ ಕೊನೆಗೊಳಿಸುತ್ತದೆ. ಇದು ಬರೋಬ್ಬರಿ 1,015 ಕಿಮೀ ದೂರ ಚಲಿಸುತ್ತದೆ. ವಿಜಯಪುರದಿಂದ ಬೆಂಗಳೂರು ತಲುಪಲು ಬಸವ ಎಕ್ಸ್‌ಪ್ರೆಸ್ 15 ಗಂಟೆ 25 ನಿಮಿಷ ತೆಗೆದುಕೊಳ್ಳುತ್ತದೆ.