ರಾಜಾಜಿನಗರ ವಿಧಾನಸಭಾ ಕ್ಷೇತ್ರ:ದಯಾನಂದನಗರ ವಾರ್ಡ್ ನಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರ 100ನೇ ವರ್ಷದ ಹುಟ್ಟುಹಬ್ಬದ ಅಚರಣೆ ಮತ್ತು ಸುಶಾಸನ ದಿನ ಹಾಗೂ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣಾ ಕಾರ್ಯಕ್ರಮ.
ನಿಕಟಪೂರ್ವ ಬಿಬಿಎಂಪಿ ಸದಸ್ಯರುಗಳಾದ ಎಮ್ ಮುನಿರಾಜು, ಶ್ರೀಮತಿ ಶಕೀಲ ಮುನಿರಾಜು ಹಾಗೂ ಮಂಡಲ ಅಧ್ಯಕ್ಷರಾದ ಸುದರ್ಶನ್, ಪ್ರಧಾನ ಕಾರ್ಯದರ್ಶಿಗಳಾದ ಗಿರೀಶ್ ಗೌಡ, ಪ್ರವೀಣ್, ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಸಂಜಯ್ ಕುಮಾರ್ ರವರು ಅಟಲ್ ಜೀ ರವರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಟಲ್ ಬಿಹಾರಿ ವಾಜಪೇಯಿ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಭದ್ರಬುನಾದಿ ಹಾಕಿದ ಪರಿಣಾಮ ಇಂದು ದೇಶದ್ಯಾಂತ ಬಿಜೆಪಿ ಪಕ್ಷ ಬಲಿಷ್ಠ ಸಂಘಟನೆಯಾಗಿ, ವಿಶ್ವದ ಅತಿಡೊಡ್ಡ ಪಕ್ಷ ಎಂದು ಖ್ಯಾತಿಗಳಿಸಿದೆ.
ಅಟಲ್ ಬಿಹಾರಿ ವಾಜಪೇಯಿರವರು ದೇಶ ಕಂಡ ಶೇಷ್ಠ ರಾಜಕಾರಣಿ. ಸೇಡಿನ ರಾಜಕಾರಣ ಮಾಡಲ್ಲಿಲ, ಹೋರಾಟದ ರಾಜಕೀಯ ಮಾಡಿದರು.
ಅಟಲ್ ಬಿಹಾರಿ ವಾಜಪೇಯಿರವರ ಅಜಾತಶತ್ರುವಾಗಿದ್ದರು. ದೇಶದ ಅಭಿವೃದ್ದಿಗೆ ಹಗಲಿರುಳು ಶ್ರಮಿಸಿದರು.
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಹೋರಾಟದಲ್ಲಿ ವಾಜಪೇಯಿ, ಅಡ್ವಾಣಿರವರ ಹೋರಾಟಫಲ ಇಂದು ಭವ್ಯ ಶ್ರೀರಾಮಮಂದಿರ ನಿರ್ಮಾಣವಾಯಿತು.
ಇಂದಿನ ಯುವ ರಾಜಕಾರಣಿಗಳು ಅಟಲ್ ಬಿಹಾರಿ ವಾಜಪೇಯಿರವರ ಆದರ್ಶ ಗುಣ, ಮಾರ್ಗದರ್ಶನದಲ್ಲಿ ಸಾಗಿದರೆ ಭವ್ಯ ಭಾರತ ನಿರ್ಮಾಣ ಸಾಧ್ಯ.
ಶಾಸಕರಾದ ಎಸ್.ಸುರೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ ದಯಾನಂದನಗರ ವಾರ್ಡ್ ನಲ್ಲಿರುವ 70ವರ್ಷ ಮೇಲ್ಪಟ್ಟ 500ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಾಣೆ ಮಾಡಿಸಿ, ಕಾರ್ಡ್ ಗಳನ್ನು ವಿತರಿಸಲಾಗುತ್ತಿದೆ.
ಅಟಲ್ ಜೀರವರ ಆದರ್ಶ ರಾಜಕಾರಣವನ್ನು ಪ್ರಧಾನಿ ನರೇಂದ್ರಮೋದಿರವರು ಪಾಲಿಸುತ್ತಾ ವಿಶ್ವದ ಬಲಿಷ್ಠ ರಾಷ್ಟ್ರವಾಗಿ ಭಾರತ ದೇಶವನ್ನು ರೂಪಿಸುತ್ತಿದ್ದಾರೆ.