BIG News ಕಾಂಗ್ರೆಸ್ ಬಿಟ್ಟರು"ಕೈ" ಬಿಡಲಿಲ್ಲ ಅಂತಿಮ ದರ್ಶನದಲ್ಲಿ ಕಮಲ ಅಷ್ಟೇನೂ ಕಾಣಿಸಿಕೊಳ್ಳಲಿಲ್ಲ ?

Bhima Samskruthi
By -

ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಬೀಗರು ಹಾಗೂ ರಾಜಕೀಯ ಗುರು ಅವರ ಪಾರ್ಥಿವ ಶರೀರ ದರ್ಶನ, ಅಂತಿಮ ಯಾತ್ರೆ ಹಾಗೂ ಅಂತ್ಯ ಸಂಸ್ಕಾರ ವರೆಗೆ ಮನೆ ಮಗನ ರೀತಿ ನಿಂತಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ, ಆದರೆ ರಾಜಕೀಯ ಕೊನೆಯ ಹೆಜ್ಜೆ ಇಟ್ಟಂತ ಪಕ್ಷ ಬಿಜೆಪಿ, ಆದರೆ ಕಮಲದ ನಾಯಕರು ಹೆಚ್ಚಾಗಿ ಕಾಣಿಸಿಕೊಳ್ಳದೆ ಇರುವುದು ಕೂಡ ಎದ್ದು ಕಾಣಿಸಿದ ಸಂಗತಿ.

ಬಿಜೆಪಿಯ ನಿಷ್ಕ್ರಿಯತೆ: ಕುಟುಂಬ ಜವಾಬ್ದಾರಿ ನಿಭಾಯಿಸುವ ಜವಾಬ್ದಾರಿ ಡಿಕೆ ಕುಟುಂಬಕ್ಕೆ ಇತ್ತು, ಆದರೆ ಎಸ್ ಎಂ ಕೆ ಅವರ ರಾಜಕೀಯ ಕೊನೆಯ ಹೆಜ್ಜೆ ಬಿಜೆಪಿ. ಬಿಜೆಪಿ ಹಿರಿಯ ನಾಯಕರು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಂತಿಮ ವಿಧಿವಿಧಾನಗಳಲ್ಲಿ ಭಾಗಿಯಾಗಿದ್ದರೂ, ಪಕ್ಷದಾದ್ಯಂತ ನಿಜವಾದ ನಾಯಕನಾಗಿ ಅವರನ್ನು ಬಿಂಬಿಸುವ, ಗೌರವ ಸಲ್ಲಿಸುವ ಪ್ರಕ್ರಿಯೆಯಲ್ಲಿ ಹಿಂದೆ ಸರಿದಂತಿದೆ. ಬಿ.ಎಸ್. ಯಡಿಯೂರಪ್ಪ ಅವರು ಸದಾಶಿವನಗರ ನಿವಾಸದಲ್ಲಿ ಅವರ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿ ಹಾಗೂ ಮದ್ದೂರಿನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದರು. ಆದರೆ ಪಕ್ಷದ ಅಧಿಕೃತ ವೇದಿಕೆಯಿಂದ ಕೃಷ್ಣ ಅವರನ್ನು ಸ್ಮರಿಸುವ ಅಥವಾ ಅವರ ಕೊಡುಗೆಗಳನ್ನು ಗುರುತಿಸುವಂತಹ ಕಾರ್ಯಕ್ರಮಗಳು ನಡೆದಿಲ್ಲ.

ಹೌದು, ಎಸ್ ಎಂ ಕೃಷ್ಣ ಬಿಜೆಪಿ ಗೆ ಬಂದ ನಂತರ ಅಭ್ಯರ್ಥಿ ಆಗದೆ ಬಿಜೆಪಿ ಮುಖಂಡರ ಮಾರ್ಗದರ್ಶನ ನೀಡುವ ಮೂಲಕ 2018ರ ವಿಧಾನ ಸಭೆಯಲ್ಲಿ,2019ರ ಲೋಕಸಭೆ ಸಕ್ರಿಯರಾಗಿದ್ರು..2023ರ ವಿಧಾನ ಸಭೆ ಚುನಾವಣೆಗೂ ಮುನ್ನ ರಾಜೀಕೀಯ ನಿವೃತ್ತ ಘೋಷಿಸಿದ್ರು.ಜೊತೆಗೆ 2018 ರ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲು ಪ್ರಯತ್ನ ನಡೆಸಿ ಸಫಲರಾದ್ರು. ಆದರೆ ವಿವಿಧ ಕಾರಣಕ್ಕೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ ಕೃಷ್ಣ ಅವರನ್ನ ಪಕ್ಷ " ಇವರು ನಮ್ಮ ನಾಯಕ" ಎಂದು ಬಿಂಬಿಸಲು ನಿಷ್ಕ್ರಿಯವಾಗಿದೆ. ಪಕ್ಷದ ವೇದಿಕೆ ಅಗಲಿದ ಗಣ್ಯರಿಗೆ ಸಂತಾಪ ಸಭೆ ಅಥವಾ ಅವರು ನೀಡಿದ ಮಾರ್ಗದರ್ಶನ ಸ್ಮರಿಸಲು ಪ್ರಯತ್ನಿಸಿಲ್ಲ. ಬಿಜೆಪಿ ನಾಯಕರು ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿ ಕುಟುಂಬ ವರ್ಗಕ್ಕೆ ಧೈರ್ಯ ಮಾಡಿದ್ದಾರೆ, ಆದರೆ ಬಿಜೆಪಿ ಅಧಿಕೃತವಾಗಿ ಹೇಳುವಷ್ಟು ಸ್ಮರಣೆ ಮಾಡಿದ್ದು ಕಂಡುಬಂದಿಲ್ಲ.

 

ಸಂಸದ ತೇಜಸ್ವಿ ಸೂರ್ಯ ಕೃಷ್ಣ ಪ್ರಶಸ್ತಿ ಸ್ಥಾಪನೆಗೆ ಮನವಿ : ಈ ಮದ್ಯೆ ಸಂಸದ ತೇಜಸ್ವಿ ಸೂರ್ಯ, ಕರ್ನಾಟಕ ಕಂಡ ಅತ್ಯಂತ ಮುತ್ಸದ್ಧಿ, ದೂರದೃಷ್ಟಿಯ ನಾಯಕರಾಗಿದ್ದ ಮಾಜಿ ಮುಖ್ಯಮಂತ್ರಿ ಶ್ರೀ ಎನ್ ಎಂ ಕೃಷ್ಣ ರವರ ಅಗಲಿಕೆ ನಾಡಿನ ಜನತೆಯನ್ನು ದುಖ ತಪ್ತರನ್ನಾಗಿಸಿದೆ. ನಾಡಿನ ಸಮಗ್ರ ಅಭಿವೃದ್ಧಿಗೆ ಅವರ ಕೊಡುಗೆ ಮತ್ತು ಬೆಂಗಳೂರು ನಗರವನ್ನು ಅಂತರಾಷ್ಟ್ರೀಯ ಮಟ್ಟದ ನಗರವನ್ನಾಗಿಸಲು ಜಾರಿಗೆ ತಂದ ದೂರದೃಷ್ಟಿಯ ಯೋಜನೆಗಳು ಅನುಕರಣೀಯ, ಅವರ ಅಭಿವೃದ್ಧಿ ಪರ, ಸಭ್ಯ, ಮೌಲ್ಯಯುತ ರಾಜಕಾರಣ ಕನ್ನಡಿಗರಿಗೆ ಸ್ಫೂರ್ತಿ ಶ್ರೀ ಎಸ್ ಎಂ ಕೃಷ್ಣ ರವರ ಹೆಸರಿನಲ್ಲಿ, ಅವರ ಸಾಧನೆಗಳು, ನೆನವುಗಳು & ಮೌಲ್ಯಗಳನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪ್ರಶಸ್ತಿಯೊಂದನ್ನು ಸ್ಥಾಪನೆ ಮಾಡಿ, ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಕ್ರಮ ಕೈಗೊಳ್ಳುವಂತೆ ನಾನು ತಮ್ಮಲ್ಲಿ ವಿನಂತಿಸುತ್ತೇನೆ, ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Tags: