ಮುದ್ದೇಬಿಹಾಳ: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಂಪುಟ ವಿಸ್ತರಣೆ ವೇಳೆ ಮುದ್ದೇಬಿಹಾಳ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಕಾರ್ಜಕ ನಿಗಮದ ಅಧ್ಯಕ್ಷ ಸಿ. ಎಸ್. ನಾಡಗೌಡ (ಅಪ್ಪಾಜಿ)ಗೆ ಸಂಪುಟ ದರ್ಜೆಯ ಸ್ಥಾನ ನೀಡಬೇಕು ಎಂದು ಬಾಕ್ಸ್ ಕಾಂಗ್ರೆಸ್ ಎ ಸಿ ಮೋರ್ಚಾ ಘಟಕ ಅಧ್ಯಕ್ಷರು ಶ್ರೀಕಾಂತ ಚಲವಾದಿ ಆಗ್ರಹಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರ'ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ಜನರಿಗೆ ಕೊಟ್ಟ ಭರವಸೆ ಇಡೇರಿಸಬೇಕು. ಶಾಸ ಕ ಸಿ.ಎಸ್.ನಾಡಗೌಡ ಆರು ಬಾರಿ ಶಾಸಕರಾಗಿ, ಎಸ್. ಬಂಗಾರಪ್ಪನವರ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿ, ದೆಹಲಿ
ವಿಶೇಷ ಪ್ರತಿನಿಧಿಯಾಗಿ ಅನು ಭವಿ ಹಾಗೂ ಸರಳ, ಸಜ್ಜನಿ ಕೆಯ ಹಿರಿಯ ರಾಜಕಾ ರಿಣಿ ಯಾಗಿದ್ದಾರೆ. ಅವರ 40 ವರ್ಷಗಳ ರಾಜಕೀಯ ಜೀವನ ದಲ್ಲಿ ಇಲ್ಲಿ ತನಕವೂ ಒಂದೂ ಕಪ್ಪು ಚುಕ್ಕೆಯಿಲ್ಲದೇ ಯಾವ ತ್ತಿಗೂ ಆಡಂಭರದ, ಪ್ರಚಾರ ಪ್ರಿಯರಾಗಿರದೇ ಜನಮೆಚ್ಚಿದ ಜನನಾಯಕರಾಗಿ ಬೆಳೆದು ನಿಂತಿದ್ದಾರೆ. ಕಳೆದ ಉಪ ಚುನಾವಣೆಯಲ್ಲಿ ಶಿಗ್ಗಾಂವಿ ಮತಕ್ಷೇತ್ರದ ಚುನಾ ವಣಾ ಜವಾಬ್ದಾರಿ ವಹಿಸಿ ಕೊಂಡು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಕಾರಣವಾಗಿದ್ದಾರೆ. 2023ರ
ಚುನಾವಣೆಯಲ್ಲಿ ಮುದ್ದೇಬಿ ಹಾಳ ಮತ ಕ್ಷೇತ್ರದಲ್ಲಿ ಗೆಲುವಿ ನೊಂದಿಗೆ ರಾಜ್ಯಾದ್ಯಂತ ಕಾಂಗ್ರೆಸ್ ಅಭ್ಯರ್ಥಿ ಗಳನ್ನು ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸುವಂತೆ ಮಾಡುವ ಮೂಲಕ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾ ಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಕೈ ಬಲಪಡಿ ಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜೊತೆಗೆ ರಾಷ್ಟ್ರೀ ಯ ನಾಯಕಿ ಸೋನಿಯಾ ಗಾಂಧಿ, ಯುವ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೇರಿದಂತೆ ನಾಯ ಕರಿಗೆ ನಿಕಟವರ್ತಿಗಳಾ ಗಿ ಸಂಭಾವಿತ ಏಕೈಕ ನಾಯಕ 'ರಾಗಿ ದ್ದಾರೆ. ಸಿ.ಎಸ್.ನಾಡ ಗೌಡರ ಅವರಿಗೆ ಸಂಪುಟ ದರ್ಜೆ ಸಚಿವರನ್ನಾಗಿ ಮಾಡುವ ಮೂಲಕ ಚುನಾವಣೆ ವೇಳೆ ನೀಡಿದ ಮಾತು ಉಳಿಸಿಕೊ ಳ್ಳುವಂತೆ ಒತ್ತಾಯಿಸಿದರು.