ಬೆಂಗಳೂರು ಟು ಮದ್ದೂರು! ಎಸ್ಎಂ ಕೃಷ್ಣರ ಪಾರ್ಥೀವ ಶರೀರ ತೆರಳುವ ಮಾರ್ಗದ ವಿವರ ಇಲ್ಲಿದೆ
ಬುಧವಾರ ಅವರ ಅಂತಿಮ ಸಂಸ್ಕಾರ ನಡೆಯಲಿದ್ದು, ಬೆಂಗಳೂರಿನಲ್ಲಿ ಅಂತಿ ದರ್ಶನದ ನಂತರ ಹುಟ್ಟೂರಾದ ಮದ್ದೂರಿನ ಸೋಮನಹಳ್ಳಿಯಲ್ಲಿ ನಡೆಯಲಿದೆ. ಸೋಮನ ಹಳ್ಳಿಗೆ ಎಸ್ಎಂ ಕೃಷ್ಣ ಅವರ ಪಾರ್ಥೀವ ಶರೀರವನ್ನ ತೆಗೆದುಕೊಂಡು ಹೋಗುವ ಮುನ್ನ ಬೆಂಗಳೂರಿನ ಸದಾಶಿವ ನಗರದ ಅವರ ನಿವಾಸದಲ್ಲಿ ಮಂಗಳವಾರ ಇಡೀ ದಿನ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಮಾಜಿ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ (SM Krishna) ಮಂಗಳವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಕೃಷ್ಣ ಅವರು ತಮ್ಮ 92ನೇ ವಯಸ್ಸಿಗೆ ನಿಧನರಾಗಿದ್ದಾರೆ. ರಾಜಕೀಯದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಗೆದ್ದು ಶಾಸಕರಾದ ನಂತರ ಕಾಂಗ್ರೆಸ್ ಸೇರಿ 43 ವರ್ಷಗಳಲ್ಲಿ ಶಾಸಕ, ಸಚಿವ, ಮುಖ್ಯಮಂತ್ರಿ, ರಾಜ್ಯಪಾಲ ಹಾಗೂ ವಿದೇಶಾಂಗ ಸಚಿವರಂತಹ ಉನ್ನತ ಹುದ್ದೆಗಳನ್ನ ಅಲಂಕರಿಸಿ, ಮಂಡ್ಯದಿಂದ ಇಂಡಿಯಾದಲ್ಲೇ ಜನಪ್ರಿಯ ರಾಜಕಾರಣಿಯಾಗಿ ಬೆಳೆದರು.
16ನೇ ಮುಖ್ಯಮಂತ್ರಿ
ರಾಜ್ಯದ 16ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಕೃಷ್ಣ ಅವರು ಭೀಕರ ಬರಗಾಲ, ಕಾವೇರಿ ಹೋರಾಟ, ನಟ ರಾಜಕುಮಾರ್ ಅಪಹರಣಗಳಂತಹ ಸಾಕಷ್ಟು ಸಂಕಷ್ಟಗಳನ್ನ ಎದುರಿಸಿದರೂ, ರಾಜ್ಯವನ್ನ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ದಿ ಪಡಿಸುವಲ್ಲಿ ಕೃಷ್ಣ ಅವರ ಪಾತ್ರ ಮಹತ್ವದ್ದಾಗಿತ್ತು. ಅಂತಹ ಮಹಾನ್ ನಾಯಕನನ್ನ ರಾಜ್ಯ ಇಂದು ಕಳೆದುಕೊಂಡಿದೆ. ವಿವಿಧ ಪಕ್ಷದ ನಾಯಕರು, ರಾಜ್ಯ ಜನತೆ, ಕೃಷ್ಣ ಅವರ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಐಟಿ ಸಿಟಿಯಾಗಿ ಪರಿವರ್ತಿಸುವಲ್ಲಿ ಎಸ್ಎಂ ಕೃಷ್ಣ ಪಾತ್ರ ಹೇಗಿತ್ತು?
ಸದಾಶಿವ ನಗರದಲ್ಲಿ ಇಡೀ ದಿನ ಅಂತಿಮ ದರ್ಶನ
ಬುಧವಾರ ಅವರ ಅಂತಿಮ ಸಂಸ್ಕಾರ ನಡೆಯಲಿದ್ದು, ಬೆಂಗಳೂರಿನಲ್ಲಿ ಅಂತಿ ದರ್ಶನದ ನಂತರ ಹುಟ್ಟೂರಾದ ಮದ್ದೂರಿನ ಸೋಮನಹಳ್ಳಿಯಲ್ಲಿ ನಡೆಯಲಿದೆ. ಸೋಮನ ಹಳ್ಳಿಗೆ ಎಸ್ಎಂ ಕೃಷ್ಣ ಅವರ ಪಾರ್ಥೀವ ಶರೀರವನ್ನ ತೆಗೆದುಕೊಂಡು ಹೋಗುವ ಮುನ್ನ ಬೆಂಗಳೂರಿನ ಸದಾಶಿವ ನಗರದ ಅವರ ನಿವಾಸದಲ್ಲಿ ಮಂಗಳವಾರ ಇಡೀ ದಿನ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬುಧವಾರ ಸಂಜೆ ಅಂತ್ಯ ಸಂಸ್ಕಾರ
ವಿದೇಶದಲ್ಲಿರುವ ಸಂಬಂಧಿಕರು ಬರಬೇಕಿರುವುದರಿಂದ ನಾಳೆ ಅಂತಿಮ ಸಂಸ್ಕಾರ ಕಾರ್ಯ ನಡೆಸಲಾಗುತ್ತದೆ. ಬುಧವಾರ ಸಂಜೆ ಸೋಮನಹಳ್ಳಿಯ ಕಾಫಿ ಡೆ ಆವರಣದಲ್ಲಿ ಕೃಷ್ಣ ಅವರ ಅಂತಿ ವಿಧಿವಿಧಾನ ನಡೆಯಲಿದೆ. ಸೋಮನಹಳ್ಳಿಯಲ್ಲಿರುವ ಕಾಫಿ ಡೇ ಆವರಣದಲ್ಲಿ ಜೆಸಿಬಿ ಮೂಲಕ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಸೋಮನಹಳ್ಳಿಯಲ್ಲಿ ಎಸ್ಎಂ ಕೃಷ್ಣ ಬೃಹತ್ ಮನೆ ನಿರ್ಮಿಸಿದ್ದರು. ಅದು ಅವರ ಇಷ್ಟದ ಸ್ಥಳ, ಮನೆಯೂ ಆಗಿತ್ತು. ಬೆಂಗಳೂರಲ್ಲಿ ನೆಲೆಸಿದ ನಂತರ ಅದನ್ನ ಕೆಫೆ ಕಾಫಿ ಡೇಗೆ ನೀಡಿದ್ದರು. ಇದೀಗ ಅವರ ಇಷ್ಟದ ಸ್ಥಳದಲ್ಲೇ ಅಂತ್ಯಸಂಸ್ಕಾರಕ್ಕೆ ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ಸಿದ್ಧತೆ ನಡೆಯುತ್ತಿದೆ.
ಇದನ್ನೂ ಓದಿ: ಸ್ತ್ರೀಶಕ್ತಿ, ಬಿಸಿಯೂಟ ಸೇರಿ ರಾಜ್ಯದಲ್ಲಿ ಎಸ್ ಎಂ ಕೃಷ್ಣ ಜಾರಿಗೆ ತಂದ ಅದ್ಭುತ ಯೋಜನೆಗಳು ಇವು
ಸೋಮನಹಳ್ಳಿ ಪಾರ್ಥೀವ ಶರೀರ ತೆರಳುವ ಮಾರ್ಗದ ವಿವರ
ಎಸ್ ಎಂ ಕೃಷ್ಣ ಅವರ ಪಾರ್ಥೀವ ಶರೀರ ಬೆಳಿಗ್ಗೆ 8 ಗಂಟೆಗೆ ಅವರ ಸದಾಶಿವನಗರದ ಮನೆಯಿಂದ ತೆರಳಲಿದೆ. ಬೆಂಗಳೂರಿನಿಂದ ಮದ್ದೂರಿಗೆ ಕಾರ್ಪೊರೇಷನ್ ಮೂಲಕ ಕೊಂಡಯ್ಯಲಾಗುತ್ತದೆ. ಮಾರ್ಗಮಧ್ಯದಲ್ಲಿ ಕೆಂಗೇರಿ ಬಳಿ ಕೆಲವು ನಿಮಿಷ ಅಂತಿಮ ದರ್ಶನಕ್ಕೆ ನಿಲ್ಲಿಸಲಾಗತ್ತದೆ.
ಅಲ್ಲಿಂದ ನೇರವಾಗಿ ಬಿಡದಿಗೆ ತೆರಳಲಿದ್ದು, ಬಿಡದಿಯಲ್ಲಿಯೂ ಕೆಲವು ನಿಮಿಷ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ನಂತರ ರಾಮನಗರದಲ್ಲಿಯೂ ಕೆಲವು ನಿಮಿಷ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ನಂತರ ಚನ್ನಪ್ಪಟ್ಟಣ ಮೂಲಕ ಮದ್ದೂರಿಗೆ ತೆರಳಲಿದೆ.