ಬೈಲಹೊಂಗಲ: ಚಲಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ನ ಪಾಟಾ ತುಂಡಾಗಿ ಬಸ್ ರಸ್ತೆ ಬದಿ ಹೊರಳಿದ್ದರ ಪರಿಣಾಮ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬೆಳಗಾವಿ ಬಾಗಲಕೋಟ ರಾಜ್ಯ ಹೆದ್ದಾರಿಯ ವಡಗೋಲ ಕರೆಮ್ಮದೇವಿ ದೇವಸ್ಥಾನ ಸನಿಹ ಬುಧವಾರ ನಡೆದಿದೆ.
ಸುಮಾರು ಮೂವತ್ತಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದ ಬೆಳಗಾವಿಯಿಂದ ಬಾಗಲಕೋಟಗೆ ತೆರಳುತ್ತಿದ್ದ ಸಾರಿಗೆ ಬಸ್ಸಿನ ಪಾಟಾ ತುಂಡಾಗಿ, ರಸ್ತೆ ಬಲ ಬದಿ ಹೊರಳಿದ್ದರ ಪರಿಣಾಮ ಬಸ್ಸಿನಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು, ಯರಗಟ್ಟಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.