ಅಪ್ಪು ಸಮಾಧಿಗೆ ಜಾನಿ ಮಾಸ್ಟರ್ ನಮನ!
ಬೆಂಗಳೂರಿನಲ್ಲಿ ನನ್ನ ಮುಂದಿನ ಪ್ರಾಜೆಕ್ಟ್ ಶುರು ಮಾಡುವ ಮೊದಲು ಡಾ.ರಾಜ್‌ಕುಮಾರ್, ಪಾರ್ವತಮ್ಮ ಮತ್ತು ಪುನೀತ್ ರಾಜ್ ಕುಮಾರ್ ಸರ್ ಅವರ ಸಮಾಧಿಗೆ ನಮಿಸಲು ಬಂದಿದ್ದು, ಅವರ ಆಶೀರ್ವಾದ ಪಡೆದಿದ್ದೇನೆ ಎಂದು ಜಾನಿ ಮಾಸ್ಟರ್ ಬರೆದಿದ್ದಾರೆ.
ಲೈಂಗಿಕ ದೌರ್ಜನ್ಯದ ಆರೋಪ
ಜಾನಿ ಮಾಸ್ಟರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿತ್ತು. ಹಲವು ಬಾರಿ ಲೈಂಗಿಕ ದೌರ್ಜನ್ಯವೆಸಗಿರುವುದಾಗಿ 21 ವರ್ಷದ ಯುವತಿ ಆರೋಪಿಸಿದ್ರು. ಈ ಸಂಬಂಧ ಸೈಬರಾಬಾದ್ ರಾಯದುರ್ಗಂ ಪೊಲೀಸರು ಎಫ್ಐಆರ್ ದಾಖಲಿಸಿದ್ರು.
ಜಾನಿಯೊಂದಿಗೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿರುವುದಾಗಿ ಹೇಳಿಕೊಂಡಿರುವ ಯುವತಿ, ಕಳೆದ ಕೆಲವು ತಿಂಗಳುಗಳಿಂದ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಚೆನ್ನೈ, ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಲ್ಲಿ ಒಟ್ಟಿಗೆ ಚಿತ್ರೀಕರಣದ ಸಮಯದಲ್ಲಿ ತನ್ನ ಮೇಲೆ ಅನೇಕ ಬಾರಿ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ರು. ಹೈದರಾಬಾದ್‌ನ ನರಸಿಂಗಿಯಲ್ಲಿರುವ ತನ್ನ ಸ್ವಂತ ಮನೆಯಲ್ಲಿ ಜಾನಿ ಹಲವು ಬಾರಿ ತನ್ನನ್ನು ನಿಂದಿಸಿರುವುದಾಗಿ ಆಕೆ ಪೊಲೀಸರಿಗೆ ತಿಳಿಸಿದ್ರು.
ಪೊಲೀಸರು ಜಾನಿ ಮಾಸ್ಟರ್ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) 376 (ಅತ್ಯಾಚಾರ) ಕ್ರಿಮಿನಲ್ ಬೆದರಿಕೆ (506) ಮತ್ತು ಸ್ವಯಂ ಪ್ರೇರಿತವಾಗಿ ಅಪಮಾನ ಉಂಟು ಮಾಡುವುದು (323) ರ ಕಲಂ (2) ಮತ್ತು (n) ಅಡಿಯಲ್ಲಿ ಪ್ರಕರಣ ದಾಖಲಿಸಿದ್ರು.