2027ರ ಮಾರ್ಚ್ ವೇಳೆಗೆ ದೇಶದಲ್ಲಿ 400 ವಂದೇ ಭಾರತ್ ರೈಲುಗಳ ಸಂಚಾರ ಆರಂಭಿಸಬೇಕು ಎಂದು ಗುರಿ ಹೊಂದಲಾಗಿದೆ. ಅಲ್ಲದೇ ರೈಲಿನಲ್ಲಿ ಸರಕು ಸಾಗಾಟಕ್ಕೆ ಸಹ ಆದ್ಯತೆ ನೀಡಬೇಕು, ಆ ಮೂಲಕ ಆದಾಯ ಸಂಗ್ರಹಣೆ ಮಾಡಲು ಚಿಂತಿಸಲಾಗಿದ್ದು, ಈ ಕುರಿತು ಹಲವು ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸುವ ನಿರೀಕ್ಷೆ ಇದೆ.
ರಸ್ತೆ ಮತ್ತು ಭೂ ಸಾರಿಗೆ ಇಲಾಖೆಗೆಯ ಅನುದಾನ ಈ ಬಾರಿ ಶೇ 3 ರಿಂದ 4ರಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಅಲ್ಲದೇ ಭೂ ಸಾರಿಗೆ ಜಾಲವನ್ನು 146,000 ಕಿ. ಮೀ.ಗೆ ವಿಸ್ತರಣೆ ಮಾಡಲಾಗುತ್ತದೆ. ಅದೇ ಮಾದರಿಯಲ್ಲಿ ರೈಲ್ವೆ ಜಾಲ 68,000 ಕಿ. ಮೀ.ಗೂ ಅಧಿಕವಾಗಿದ್ದು, ಅದನ್ನು ವಿಸ್ತರಿಸುವ ಸಾಧ್ಯತೆ ಇದೆ.
ವಿವಿಧ ರೈಲ್ವೆ ಯೋಜನೆಗಳಿಗೆ ಭೂ ಸ್ವಾಧೀನದ ಕಾರಣ ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಬಜೆಟ್‌ನಲ್ಲಿ ರೈಲ್ವೆ ಇಲಾಖೆಯ ಆದಾಯವನ್ನು ಶೇ 2 ರಿಂದ 3ಕ್ಕೆ ಏರಿಕೆ ಮಾಡಿದರೆ ಭೂ ಸ್ವಾಧೀನ ಚುರುಕುಗೊಳಿಸಿ ಯೋಜನೆಯನ್ನು ಕಾರ್ಯಗತಗೊಳಿಸಲು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಾರತದ ರಾಷ್ಟ್ರೀಯ ರೈಲು ಯೋಜನೆ 2030ರ ಅಡಿ ರೈಲ್ವೆ ಇಲಾಖೆಯ ಆಧುನೀಕರಣಕ್ಕೆ ಹಲವಾರು ಯೋಜನೆ ರೂಪಿಸಲಾಗುತ್ತಿದೆ. ಮೂಲ ಸೌಕರ್ಯಗಳ ಅಭಿವೃದ್ಧಿ, ಪ್ರಯಾಣಿಕರ ಸೌಲಭ್ಯಗಳು, ನಿಲ್ದಾಣದ ಅಭಿವೃದ್ಧಿ, ರೈಲು ಸಂಪರ್ಕ ಜಾಲ ವಿಸ್ತರಣೆ ಇದರಲ್ಲಿ ಸೇರಿವೆ.
ಇನ್ನು ವಿಜಯಪುರ ಬಾಗಲಕೋಟ ಜಿಲ್ಲೆ ಸೇರಿದಂತೆ ಅನೇಕ ರೈಲ್ವೆ ಯೋಜನೆಗಳು ಅಭಿವೃದ್ಧಿಪಡಿಸಲು ಬಾಕಿ ಇರುವುದರಿಂದ ಇದಕ್ಕೆ ಕೇಂದ್ರ 2025ರ ರೈಲ್ವೆ ಬಜೆಟ್ ನಲ್ಲಿ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ.
ಆಲಮಟ್ಟಿ ಆಣೆಕಟ್ಟಿನಿಂದ ಯಾದಗಿರಿ ವರೆಗಿನ ರೈಲ್ವೆ ಮಾರ್ಗಕ್ಕೆ ಈಗಾಗಲೇ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅನೇಕ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಹೋರಾಟಗಾರರು ಮನವಿಯನ್ನ ಸಲ್ಲಿಸುತ್ತಿದ್ದಾರೆ.
ಈ ಬಜೆಟ್ ನಲ್ಲಿ ಮುದ್ದೇಬಿಹಾಳ ಜನತೆಗೆ ಸಿಹಿ ಸುದ್ದಿ ನೀಡುತ್ತಾರಾ ? ಕೇಂದ್ರ ರೈಲ್ವೆ ಖಾತೆ ಸಚಿವ ವಿ ಸೋಮಣ್ಣ ?