Bengaluru: "ಡಿ.ಕೆ ಶಿವಕುಮಾರ್‌ ಬಂದ ಮೇಲೆ ಬೆಂಗಳೂರು ಸಮಸ್ಯೆ ಹೆಚ್ಚಳ"!

Bhima Samskruthi
By -
0



ಡಿ.ಕೆ ಶಿವಕುಮಾರ್ ಅವರ ಆಡಳಿತ ವೈಖರಿಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಡಿ.ಕೆ ಶಿವಕುಮಾರ್‌ ಅವರ ಕಾರ್ಯವೈಖರಿ ಹಾಗೂ ಅವರು ನೀಡಿರುವ ಹೇಳಿಕೆಗೆ ಸೋಷಿಯಲ್‌ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಡಿ.ಕೆ ಶಿವಕುಮಾರ್‌ ಅವರ ಹೇಳಿಕೆಗೆ ವಿರೋಧ ಪಕ್ಷಗಳು ಹಾಗೂ ಉದ್ಯಮಿಗಳು ಡಿ.ಕೆ ಶಿವಕುಮಾರ್‌ ಅವರ ಮೇಲೆ ಮುಗಿಬಿದ್ದಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯನ್ನು ನಡೆಸದೆ ಇರುವುದೇ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ. ಇನ್ನು ಕೆಲವರು ಡಿ.ಕೆ ಶಿವಕುಮಾರ್‌ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಮೇಲೆಯೇ ಬೆಂಗಳೂರಿನಲ್ಲಿ ಸಮಸ್ಯೆ ಹೆಚ್ಚಳವಾಗಿದೆ ಎಂದು ದೂರಿದ್ದಾರೆ.


ಬೆಂಗಳೂರಿನಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಂದರೆ ಸ್ಥಳೀಯ ಸಂಸ್ಥೆಯ ಚುನಾವಣೆಯನ್ನು ಕಳೆದ ಐದು ವರ್ಷಗಳಿಂದಲೂ ಮಾಡಿಲ್ಲ. ಇದರಿಂದ ಬೆಂಗಳೂರಿನಲ್ಲಿ ಸಹಜವಾಗಿಯೇ ಸಮಸ್ಯೆಗಳು ಹೆಚ್ಚಾಗಿವೆ. ಬೆಂಗಳೂರಿನಲ್ಲಿ ಪ್ರತಿ ವಾರ್ಡ್‌ ಮಟ್ಟದಲ್ಲೂ ಕೌನ್ಸಿಲರ್‌ಗಳು ಇರುತ್ತಿದ್ದರು. ಆದರೆ, ಇದೀಗ ಬೆಂಗಳೂರಲ್ಲಿ ಐದು ವರ್ಷಗಳಿಂದ ಕೌನ್ಸಿಲರ್‌ಗಳೇ ಇಲ್ಲ. ಕೌನ್ಸಿಲರ್‌ಗಳು ಇದ್ದ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಪಾಲಿಕೆಯ ಕೌನ್ಸಿಲರ್‌ಗಳ ಸಭೆ ನಡೆಯುತ್ತಿತ್ತು. ಅಲ್ಲದೆ ಮಾಸಿಕ ಸಭೆಗಳು ಸಹ ನಡೆಯುತ್ತಿದ್ದವು. ಆದರೆ, ಇದೀಗ ಈ ರೀತಿಯ ಯಾವುದೇ ಸಭೆಗಳು ಸಹ ನಡೆಯುತ್ತಿಲ್ಲ.

ಇನ್ನು ಡಿ.ಕೆ ಶಿವಕುಮಾರ್‌ ಅವರು ಬೆಂಗಳೂರಿನ ಸಮಸ್ಯೆಗಳನ್ನು ಪರಿಹರಿಸಲು ದೇವರೇ ಬಂದರೂ ಸಾಧ್ಯವಿಲ್ಲ ಎಂಬರ್ಥದಲ್ಲಿ ಮಾತನಾಡಿರುವುದು ಸಹ ಭಾರೀ ಟೀಕೆಗೆ ಕಾರಣವಾಗಿದೆ. ಉದ್ಯಮಿ ಮೋಹನ್‌ದಾಸ್ ಪೈ ಅವರು ಸಹ ಡಿ.ಕೆ ಶಿವಕುಮಾರ್‌ ಅವರ ಹೇಳಿಕೆಗೆ ತೀಕ್ಷ್ಣವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಡಿ.ಕೆ ಶಿವಕುಮಾರ್‌ ಅವರು ಆಡಳಿತ ವೈಫಲ್ಯವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ದೇವರು ಮಂತ್ರಿಗಳನ್ನು (ಡಿ.ಕೆ ಶಿವಕುಮಾರ್‌) ಅವರನ್ನು ಕೈಬಿಟ್ಟಿರಬಹುದು. ಆದರೆ, ಇನ್ನೂ ಬೆಂಗಳೂರನ್ನು ಕೈಬಿಟ್ಟಿಲ್ಲ. ಈಗಲಾದರೂ ಅವರು ಬೆಂಗಳೂರಿನ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
Tags:

Post a Comment

0Comments

Post a Comment (0)