BIG NEWS ಬೆಂಗಳೂರಿಗರೇ ಎಚ್ಚರ… ಎಚ್ಚರ… – ನೀರು ವ್ಯರ್ಥ ಮಾಡಿದ್ರೆ ಬೀಳುತ್ತೆ 5,000 ದಂಡ!

Bhima Samskruthi
By -
0

ಬೆಂಗಳೂರು: ನಗರದಲ್ಲಿ ನೀರು ವ್ಯರ್ಥ ಮಾಡಿದ್ರೆ ಜಲಮಂಡಳಿ (Water Board) 5,000 ರೂ. ದಂಡ ವಿಧಿಸಲಿದೆ. ಬೇಸಿಗೆಗೆ ಮುನ್ನವೇ ಜಲಮಂಡಳಿ ಎಚ್ಚೆತ್ತುಕೊಂಡಿದೆ. ಕಳೆದ ಬಾರಿಯಂತೆ ಈ ಬಾರಿಯೂ ನೀರು ವ್ಯರ್ಥ ಮಾಡಿದ್ರೆ 5,000 ರೂ. ದಂಡ ವಿಧಿಸೋದಕ್ಕೆ ಮುಂದಾಗಿದೆ. ಈ ಕುರಿತು ಜಲಮಂಡಳಿ ಆದೇಶ ಹೊರಡಿಸಿದೆ.

ಕಳೆದ ಬಾರಿ ಉಂಟಾದ ನೀರಿನ (Water) ಅಭಾವ, ಈ ಬಾರಿ ಆಗದಂತೆ ಜಲಮಂಡಳಿ ನೀರು ಉಳಿತಾಯಕ್ಕೆ ಮುಂದಾಗಿದೆ. ಈ ಬಾರಿಯೂ ನೀರು ಪೋಲು ಮಾಡಿದ್ರೆ ದಂಡಾಸ್ತ್ರಕ್ಕೆ ಮುಂದಾಗಿದೆ. ಕಾರು, ಬೈಕ್, ಮನೆಯಂಗಳ, ಇತರೆ ಕೆಲಸಗಳಿಗೆ ನೀರು ವ್ಯರ್ಥ ಮಾಡಿದ್ರೆ ಆಯಾ ವಲಯದ ಜಲಮಂಡಳಿ ಇಂಜಿನಿಯರ್ಸ್‌ 5 ಸಾವಿರ ರೂ. ದಂಡ ವಿಧಿಸಲಿದ್ದಾರೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34ರ ಅನುಸಾರ ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ವಾಹನಗಳ ಸ್ವಚ್ಚತೆಗೆ, ಕೈತೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ, ಮನರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ ಹಾಗೂ ಸಿನಿಮಾ ಮಂದಿರ ಮತ್ತು ಮಾಲುಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆಗೆ ನಿಷೇದಿಸಲಾಗಿದೆ. ಇದರ ಜೊತೆಗೆ ರಸ್ತೆ ನಿರ್ಮಾಣ ಮತ್ತು ಸ್ವಚ್ಚತೆಗೆ ಕುಡಿಯುವ ನೀರನ್ನ ಬಳಸಿದ್ರೆ 5 ಸಾವಿರ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ನಗರದಲ್ಲಿ ಬೋರ್‌ವೆಲ್‌ಗಳು ಬತ್ತಿಹೋಗ್ತಿದ್ದು, ಬೇಸಿಗೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ನೀರಿನ ಅಭಾವ ಆಗದಂತೆ ಜಲಮಂಡಳಿ ಇಗಿನಿಂದಲೇ ಸಿದ್ಧತೆ ಮಾಡಿಕೊಳ್ತಿದೆ.


Tags:

Post a Comment

0Comments

Post a Comment (0)