ನಾಲತವಾಡ:- ಪಟ್ಟಣದಲ್ಲಿ ಸುಮಾರು ವರ್ಷಗಳಿಂದ ಅನಧಿಕೃತ ಬಡ್ಡಿ ದಂಧೆ ನಡೆಯುತ್ತೀರುವ ಸಾಕಷ್ಟು ದೂರುಗಳು ಬಂದಿವೆ ಈ ಕುರಿತು ತಪ್ಪದೇ ಮಾಹಿತಿ ನೀಡಬೇಕು ಮಟ್ಟ ಹಾಕುವ ಕೆಲಸ ನಮ್ಮದು ಎಂದು ಮುದ್ದೇಬಿಹಾಳ ಸಿಪಿಐ ಮಹಮ್ಮದ ಫಸಿವುದ್ದಿನ್ ಹೇಳಿದರು.
ಭಾಗವಹಿಸಿದ್ದ ಸಭೆಯಲ್ಲಿ ಸಾರ್ವಜನೀಕರ ಅಹವಾಲುಗಳನ್ನು ಆಲಿಸಿದ ಅಧಿಕಾರಿಗಳು ಸಿಬ್ಬಂದಿಗಳ ಕೊರತೆ ಹಿನ್ನಲೆಯಲ್ಲಿ ಹಲವು ಅಕ್ರಮ ಚಟುವಟಿಕೆಗಳು ತಡೆಯುವಲ್ಲಿ ವಿಳಂಬ ಅನಿವಾರ್ಯ, ಟ್ರಾಫಿಕ್, ಮರಳು ದಂಧೆ, ಮೈಕ್ರೋಫಿನಾನ್ಸ್ ಕಿರಿಕಿರಿ, ಮಹಿಳೆಯರಿಗೆ ಕಿರುಕುಳ, ಸಿಸಿ ಕ್ಯಾಮರಾ ದುರಸ್ಥಿಗೆ ಪ.ಪಂ ಯವರೊಂದಿಗೆ ಮಾತುಕತೆ, ಬಾಲಾಪರಾಧ ತಡೆಯುವುದು, ಚಿಕ್ಕ ಮಕ್ಕಳಿಂದ ಮದ್ಯಪಾನ ವ್ಯಸನ, ಕಳ್ಳತನ, ಬಾಲ ಕಾರ್ಮಿಕರ ಸಾಗಣೆ, ಲೈಂಗಿಕ ದೌರ್ಜನ್ಯ, ಗಾಂಜಾ ಮಾಫಿಯಾ, ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ, ಸಾಮಾಜೀಕ ಜಾಲ ತಾಣಗಳಲ್ಲಿ ಇಲ್ಲ ಸಲ್ಲದ ಶೇರ್ ಮಾಡುವುದು, ಹೆಚ್ಚಿನ ಸಿಬ್ಬಂದಿಗಳ ನೇಮಕ ಶೀಘ್ರವಾಗಿ ಕ್ರಮ ಕೈಗೊಳ್ಳುತ್ತೇನೆ, ಮಾರುಕಟ್ಟೆ ಸೇರಿದಂತೆ ಟ್ರಾಫಿಕ್ ನಿಯಂತ್ರಣಕ್ಕೆ ಸ್ಥಳಿಯ ಪೇದೆಗಳಲ್ಲೇ ವೈಟ್ ಯುನಿಫರ‍್ಮ ಪೇದೆಯನ್ನು ನೇಮಿಸುತ್ತೇವೆ,ಶಾಲೆಗಳಲ್ಲಿ ಮಕ್ಕಳ ಅಕ್ರಮ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ಸಂಜೆ ಪೇದೆಗಳನ್ನು ಗಸ್ತು ಮಾಡುವಂತೆ ಆದೇಶಿಸುತ್ತೇನೆ ಎಂದ ಅವರು ಮುಂದಿನ ಸಭೆಯಲ್ಲಿ ಸದ್ಯ ಚರ್ಚಿಸಿದ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದರು. ವೇದಿಕೆಯಲ್ಲಿ ಪ.ಪಂ ಉಪಾಧ್ಯಕ್ಷ ಬಸವರಾಜ ಗಂಗನಗೌಡ್ರ, ಎಲ್.ಎಚ್.ಅವಟಿ, ಡಾ.ಎಸ್.ಬಿ.ಗಂಗನಗೌಡ್ರ, ಮಲ್ಲು ತಳವಾರ ಮತ್ತು ಸಭೆಯಲ್ಲಿ ಸ್ಥಳಿಯ ಯುವಕರಾದ ಯೂನೂಷ್ ಮೂಲಿಮನಿ, ಗುಂಡಣ್ಣ ಚಲವಾದಿ, ಭೀಮಣ್ಣ ಗುರಿಕಾರ, ಮೈಬೂಬ ಕುಳಗೇರಿ, ಶರಣು ಭೋವಿ, ಮುರಗೇಶ ಮಸ್ಕಿ, ಮೌನೇಶ ಮಾದರ, ಚಂದ್ರಶೇಖರ ಭಿಕ್ಷಾವತಿಮಠ, ಮಹಾಂತೇಶ ಗಂಗನಗೌಡ್ರ ಸಮಸ್ಯೆಗಳನ್ನು ಅಧಿಕಾರಿಗಳೊಂದಿಗೆ ಹಂಚಿಕೊAಡರು.ಪೇದೆಗಳಾದ ಬಸವರಾಜ ಚಿಂಚೊಳ್ಳಿ, ಬಸವರಾಜ ಬಿರಾದಾರ ಹಾಗೂ ಎಂ.ಹಬ್ಬುಲಿ ಇದ್ದರು. ಇದೇ ವೇಳೆ ನೂತನವಾಗಿ ಆಗಮಿಸಿದ ಹಿನ್ನಲೆಯಲ್ಲಿ ಸಿಪಿಐ ಅವರನ್ನು ಸನ್ಮಾನಿಸಿ ಗೌರವಿಸಿದರು.
ಪೋಟೋ೨೫ಎನ್‌ಎಲ್ಟಿ೧ ನಾಲತವಾಡ: ಜನ ಸಂಪರ್ಕ ಸಭೆಯಲ್ಲಿ ಸಿಪಿಐ ಮಹಮ್ಮದ ಫಸಿವುದ್ದಿನ್ ಮಾತನಾಡಿದರು.