ನವದೆಹಲಿ:- ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ವದ ಬದಲಾವಣೆ ಮಾಡಿದೆ. ಈ ಪೈಕಿ ಫೆಬ್ರವರಿ 1 ರಿಂದ ಮಾಡಿರುವ ಎರಡು ಬದಲಾವಣೆ ದೇಶದ ಪ್ರತಿಯೊಬ್ಬರಿಗೂ ತಟ್ಟಲಿದೆ. ಪ್ರಮುಖವಾಗಿ ಎಟಿಎಂ ಹಣ ಡ್ರಾ ನಿಯಮ ಹಾಗೂ ಯುಪಿಐ ಪಾವತಿ ವಿಚಾರದಲ್ಲಿ ಬದಲಾವಣೆಯಾಗಿದೆ. ಕೇಂದ್ರ ಬಜೆಟ್ ಮಂಡನೆ ಬೆನ್ನಲ್ಲೇ ದೇಶದಲ್ಲಿ ಎಟಿಎಂ ಡ್ರಾ ಹಾಗೂ ಯುಪಿಐ ಪಾವತಿ ನಿಯಮದಲ್ಲಿ ಮಹತ್ವದ ಬದಲಾವಣೆಯಾಗಿದೆ.
ಕೇಂದ್ರೀಯ ಬಜೆಟ್ ದಿನದಂದು ಸಾಮಾನ್ಯ ಜನರಿಗೆ ಮುಖ್ಯವಾದ ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿಗೆ ಸಂಬಂಧಿಸಿದಂತೆ ಹಲವಾರು ನಿಯಮಗಳಲ್ಲಿ ಬದಲಾವಣೆಗಳಾಗಿವೆ. ಶನಿವಾರದಿಂದ ATM ಶುಲ್ಕಗಳು ಹೆಚ್ಚಾಗಿವೆ. ಅಂದರೆ ATM ನಿಂದ ಹಣ ಡ್ರಾ ಮಾಡುವ ಶುಲ್ಕ ಹೆಚ್ಚಾಗಿದೆ. ಹೊಸ ನಿಯಮಗಳ ಪ್ರಕಾರ, ಈಗ ಪ್ರತಿ ತಿಂಗಳು ಕೇವಲ 3 ಬಾರಿ ಮಾತ್ರ ATM ನಿಂದ ಉಚಿತವಾಗಿ ಹಣ ಡ್ರಾ ಮಾಡಬಹುದು. ಇದಾದ ಬಳಿಕ, ಪ್ರತಿ ಹೆಚ್ಚುವರಿ ವಹಿವಾಟಿಗೆ 25 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಆದರೆ ಮೊದಲು ಇದು 20 ರೂಪಾಯಿಗಳಾಗಿತ್ತು. ಯಾರಾದರೂ ತಮ್ಮ ಬ್ಯಾಂಕಿನ ಬದಲು ಬೇರೆ ಬ್ಯಾಂಕಿನ ATM ನಿಂದ ಹಣ ಡ್ರಾ ಮಾಡಿದರೆ, ಪ್ರತಿ ವಹಿವಾಟಿಗೆ 30 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.