BREAKING NEWS 📰ಮೀನು ಮರಿಗಳ ಮಾರಣಹೋಮ, ಈ ಸ್ಟೋರಿ ನೋಡಿ?

Bhima Samskruthi
By -
0
 
 ನಾಲತವಾಡ:- ಸಮೀಪದ ಕೃಷ್ಣೆಯ ಒಡಲಲ್ಲಿ ಬೀಡು ಬಿಟ್ಟ ಆಂದ್ರಪ್ರದೇಶ ಮೂಲದ ಮೀನುಗಾರರಿಂದ ನಿಯಮ ಮೀರಿ ಬಿಳಚಿ ಮೀನು ಮರಿಗಳನ್ನು ಬೇಟೆಯಾಡುತ್ತೀರುವ ವಿಷಯ ಕಲೆ ಹಾಕಿದ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕರು ಎಂ.ಎಸ್.ಭಾAಗಿ ಹಾಗೂ ತಾಲೂಕಾ ಸಹಾಯಕ ನಿರ್ದೇಶಕ ಶರಣಗೌಡ ಬಿರಾದಾರ ತಂಡ ಸಮೀಪದ ಘಾಳಪೂಜಿ ಲೊಟಗೇರಿ ಪಕ್ಕದ ನದಿ ದಡಕ್ಕೆ ಭೇಟಿ ನೀಡಿ  ಅಪಾರ ಮೀನು ಮರಿಗಳ ಚೀಲ, ಬಲೆಗಳು ವಶಪಡಿಸಿಕೊಂಡ ನಂತರ ಶೆಡ್‌ಗಳ ಮೇಲೆ ದಾಳಿ ನಡೆಸಿದ ಘಟನೆ ಶುಕ್ರವಾರ ನಡೆದಿದೆ.
ಸುಮಾರು ವರ್ಷಗಳಿಂದೇ ಕೃಷ್ಣೆ ಪಕ್ಕದ ಬಲದಿನ್ನಿ,ಅಯ್ಯನಗುಡಿ, ಚಿಕ್ಕ ಬಿಜ್ಜೂರ, ಘಾಳಪೂಜಿ, ಲೊಟಗೇರಿ ಕಪನೂರ ಸೇರಿದಂತೆ ಮೀನುಗಾರರ ತಂಡವು ಬೇಟೆಯಾಡಬಾರದ ಮೀನುಗಳನ್ನು ಮನಬಂದAತೆ ಬಲೆ ಬೀಸಿ ಮಾರಣ ಹೋಮ ನಡೆಸಿದ್ದಾರೆ, ಬೇಟೆಯಾಡುವ ನಿಯಮವನ್ನು ಗಾಳಿಗೆ ತೂರಿದ ಮೀನುಗಾರರು ಪ್ರತಿಯೊಬ್ಬರೂ ೨ ರಿಂದ ೩ ಇಂಜಿನ್ ಬೋಟ್‌ಗಳನ್ನು ಬಳಸಿ ಬೆಲೆ ಬಾಳುವ ಬಿಳಚಿ ಮೀನು ಮರಿಗಳನ್ನು ಹಿಡಿಯುತ್ತಾರೆದೀ ಈ ಕುರಿತು ಸಾಕಷ್ಟು ಸಲ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳಿಯರು ಆರೋಪಿಸಿದ್ದರು, ನಂತರ ಎಚ್ಚರಗೊಂಡ ಅಧಿಕಾರಿಗಳು ಸ್ಥಳಗಳಿಗೆ ಭೇಟಿ ಬಲೆ, ಬೋಟ್ ಹಾಗೂ ಒಣಗಿಸುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನೋಟಿಸ್: ಎರಡುವರೆ ಇಂಚಿನೊಳಗಿನ ಮೀನುಗಳನ್ನು ಬೇಟೆಯಾಡುವ ನಿಯಮವಿಲ್ಲ, ಇದು ಅಪರಾಧ ತಕ್ಷಣವೇ ಮೀನುಗಾರಿಕಾ ಸಂಘಗಳಿಗೆ ಕಾರಣ ಕೇಳಿ ನೋಟಿಸ್ ನೀಡುತ್ತೇವೆ ಹಾಗೂ ಸಹಕರಿಸುತ್ತೀರುವ ಯಾರೇ ಆಗಿರಲಿ ಮುಂದಿನ ದಿನಗಳಲ್ಲಿ ನಮ್ಮ ಕೆಲಸ ನಾವು ಖಂಡಿತಾ ಮಾಡುತ್ತೇವೆ ಎಂದು ಸ್ಥಳದಲ್ಲಿದ್ದ ಅಧಿಕಾರಿಗ ಎಂ.ಎಸ್.ಭಾAಗಿ ಮೀನುಗಾರರಿಗೆ ಎಚ್ಚರಿಕೆ ನೀಡಿದರು.
ಅಧಿಕಾರಿಗಳ ಸಪೋಟ್, ಆರೋಪ: ಸುಮಾರು ವರ್ಷಗಳಿಂದಲೂ ಇಲ್ಲಿ ಎಗ್ಗಿಲ್ಲದೆ ಮೀನು ಮರಿಗಳನ್ನು ಬೇಟೆಯಾಡುತ್ತಿದ್ದಾರೆ, ಹಲವು ಮೀನುಗಾರರು ಯಾರ ಭಯವಿಲ್ಲದೇ ಎಲ್ಲಾ ಮೀನುಗಾರರಿಗೆ ಮರಿಗಳ ಬೇಟೆಗೆ ಸಪೋಟ್ ನೀಡುತ್ತಿದ್ದಾರೆ, ವಿಷಯ ಗೊತ್ತಿದ್ದರೂ ಅಧಿಕಾರಿಗಳು ಕೈಕಟ್ಟಿ ಕುಳಿತ್ತಿದ್ದಾರೆ ಈ ಅವ್ಯವಸ್ಥೆಗೆ ಕಡಿವಾಣ ಬೀಳಬೇಕು, ವಲಸೆ ಬಂದ ಮೀನುಗಾರರ ಧೋರಣೆಗೆ ಸ್ಥಳಿಯ ಮೀನುಗಾರರು ಸಂಕಷ್ಟ ಅನುಭವಿಸಬೇಕಿದೆ, ಇವರಿಗೆ ಲೈಸನ್ಸ್ ನೀಡಿದ್ದು ಅನಧಿಕೃತವೇ ಹೆಚ್ಚಾಗಿವೆ, ಸೂಕ್ತ ದಾಖಲೆಗಳನ್ನು ಪರಿಶೀಲನೆ ಮಾಡಿ ಇವರಿಗೆ ಲೈಸನ್ಸ್ ನೀಡುತ್ತಿಲ್ಲ ಎಂದು ಸ್ಥಳದಲ್ಲಿದ್ದವರು ಆರೋಪಿಸಿದರು.
ಪೋಟೋ೨೮ಎನ್‌ಎಲ್ಟಿ೧ ನಾಲತವಾಡ: ಮೀನು ಮರಿಗಳು, ಬಲೆಗಳನ್ನು ರೇಡ್ ಮಾಡಿದ ಅಧಿಕಾರಿಗಳು.

Post a Comment

0Comments

Post a Comment (0)