ಮುದ್ದೇಬಿಹಾಳ ; ಸರಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಸ್ಥಳೀಯರ ಸಹಕಾರ ಮುಖ್ಯವಾಗುತ್ತದೆ ಎಂದು ಕವಡಿಮಟ್ಟಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪಿ.ಎಸ್ ಕಸನಕ್ಕಿ ಅವರು ಹೇಳಿದರು.
2022_23 ನೇ ಸಾಲಿನ ಬಸವ ವಸತಿ ಹಾಗೂ ಅಂಬೇಡ್ಕರ್ ವಸತಿ ಯೋಜನೆಗಳ ಹೆಚ್ಚುವರಿ ಫಲಾನುಭವಿಗಳ ಆಯ್ಕೆಯನ್ನು ಗುರುವಾರ ಕವಡಿಮಟ್ಟಿ ಗ್ರಾಪಂ ಯಲ್ಲಿ ಗ್ರಾಮಸಭೆಯಲ್ಲಿ ಮಾತನಾಡಿ,ಆಯ್ಕೆ ಮಾಡಲಾದ ಫಲಾನುಭವಿಗಳು ಸಕಾಲದಲ್ಲಿ ಮನೆಗಳನ್ನು ಕಟ್ಟಿಕೊಳ್ಳಬೇಕು ಎಂದರು.
ಈ ವೇಳೆ ಬಸವ ವಸತಿ ಯೋಜನೆಯ ಹೆಚ್ಚುವರಿಯಲ್ಲಿ 15 ಮನೆಗಳ ಫಲಾನುಭವಿಗಳ ಆಯ್ಜೆ ಹಾಗೂ ಅಂಬೇಡ್ಕರ್ ಆವಾಸ ಯೋಜನೆ ಹೆಚ್ಚುವರಿ 3 ಫಲಾನುಭವಿಗಳ ಆಯ್ಜೆಯನ್ನು ಗ್ರಾಮಸಭೆಯಲ್ಲಿ ಕೈ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕವಡಿಮಟ್ಟಿ ಗ್ರಾಪಂ ಅಧ್ಯಕ್ಷೆ ಶಕುಂತಲಾ ಹಂಡರಗಲ್ಲ, ಉಪಾಧ್ಯಕ್ಷೆ ಶ್ರೀದೇವಿ ಬಿರಾದಾರ, ಜಯಶ್ರೀ ವಾಲಿಕಾರ, ಶರಣಮ್ಮ ಮಲಗಲದಿನ್ನಿ, ನೀಲಮ್ಮ ಚಲವಾದಿ, ಸಿದ್ದರಾಮಯ್ಯ ಗುರುವಿನ, ದ್ಯಾವಪ್ಪ ಹುಣಶ್ಯಾಳ,
ಮುಖಂಡರಾದ ರಾಮಣ್ಣ ರಾಜನಾಳ ಸೇರಿದಂತೆ
ಕಾರ್ಯದರ್ಶಿ ಎ .ಆರ್ ಕೂರವೇರ ಸಿಬ್ಬಂದಿಗಳಾದ ಡಿ ಬಿ ವಾಲಿಕಾರ, ವೀರಯ್ಯ ಹಿರೇಮಠ ಹಾಗೂ ಕವಡಿಮಟ್ಟಿ, ಶಿರೋಳ, ಜಲಪೂರ, ಸರೂರ, ಸರೂರ ಎಲ್ ಟಿ,ಅಂಗನವಾಡಿ,ಆಶಾ ಕಾರ್ಯಕರ್ತರು, ಗ್ರಾಪಂ ಸದಸ್ಯರು, ಗ್ರಾಮಸ್ಥರು ಸೇರಿದಂತೆ ಉಪಸ್ಥಿತರಿದ್ದರು.