ವಿಜಯಪುರ :- ಮುದ್ದೇಬಿಹಾಳ ತಾಲೂಕಿನ ಕುರುಬರ ಸಂಘದ ಸಭೆಯಲ್ಲಿ ಅವಿರೋಧ ವಾಗಿ ಆಯ್ಕೆಯಾದ ತಾಲೂಕು ಅಧ್ಯಕ್ಷ ಶ್ರೀಯುತ ಮಲ್ಲಿಕಾರ್ಜುನ್ ಮದರಿ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀಯುತ ಸಂತೋಷ್ ನಾಯ್ಕೋಡಿ ಮತ್ತು ಸರ್ವ ಸದಸ್ಯರು ಅವಿರೋಧವಾಗಿ ಆಯ್ಕೆಯಾದರು. ಇಂದು ನಡೆದ ನಗರದ ಸಂತ ಕನಕದಾಸ ಶಾಲೆಯ ಆವರಣದಲ್ಲಿರುವ ಶ್ರೀ ಬೀರೇಶ್ವರ ದೇವಾಲಯದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮುಂದಿನ ಅವಧಿಯಲ್ಲಿ ಸಮಾಜದ ಹೆಚ್ಚು ಕಾರ್ಯಕ್ರಮಗಳು ಆಗಿವೆ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಸಮಾಜದ ಮಹಾನ್ ದಾರ್ಶನಿಕರ ಜಯಂತಿಗಳಲ್ಲಿ ಹೆಚ್ಚು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಕೀರ್ತಿ ಶ್ರೀಯುತ ಎಂಎನ್ ಮದರಿ ಹಾಗೂ ಅವರ ತಂಡ ಯಶಸ್ವಿಯಾಗಿ ಕಳೆದ ಅವಧಿಯಲ್ಲಿ ಮಾಡಿದ ಅನೇಕ ಮಹಾನ್ ಕಾರ್ಯಗಳಿಗೆ ಸಮಾಜದ ನಾಯಕರುಗಳು ಯುವಕರು ಹೋರಾಟಗಾರರು ಸೇರಿದಂತೆ ಅನೇಕರು ಕೂಡ ವ್ಯಕ್ತಪಡಿಸಿದ್ದಾರೆ ಇನ್ನು ಮುಂದಿನ ಅವಧಿಗೂ ಕೂಡ ಸಾಕಷ್ಟು ಅಭಿವೃದ್ಧಿಯ ಕೆಲಸಗಳು ಮಾಡಬೇಕಾಗಿದೆ ಅವರ ಎಲ್ಲ ಕಾರ್ಯಗಳು ಬಹಳ ದೊಡ್ಡ ಪ್ರಮಾಣದಲ್ಲಿ ಸಮಾಜಕ್ಕೆ ಕೊಡುಗೆಯಾಗಲಿ ಎನ್ನುವ ಹಿತದೃಷ್ಟಿಯಿಂದ ಮುಂದಿನ ಅವಧಿಗೂ ಕೂಡ ಶ್ರೀಯುತ ಮಲ್ಲಿಕಾರ್ಜುನ್ ಮದರಿ ಅಧ್ಯಕ್ಷರಾಗಿ ಶ್ರೀಯುತ ಸಂತೋಷ್ ನಾಯ್ಕೋಡಿ ಉಪಾಧ್ಯಕ್ಷರಾಗಿ ಹಾಗೂ ಸರ್ವ ಸದಸ್ಯರು ಕೂಡ ಆಯ್ಕೆಯಾಗಿದ್ದಕ್ಕೆ ಸಮಾಜದ ಯುವಕರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮುದ್ದೇಬಿಹಾಳ ತಾಲೂಕು ಕುರುಬ ಸಂಘದ ಅಧ್ಯಕ್ಷರಾಗಿ ಮರು ಆಯ್ಕೆಯಾಗಿ ಶ್ರೀ ಮಲ್ಲಿಕಾರ್ಜುನ ಮದರಿ ಅವರನ್ನು ಸಮಾಜದ ವತಿಯಿಂದ ಹಾಗೂ ಹಿರಿಯರು ಸೇರಿ ಸರ್ವಾನುಮತವಾಗಿ ಮರಳಿ ಆಯ್ಕೆ ಮಾಡಲಾಯಿತು. ಈ ವೇಳೆಯಲ್ಲಿ ಕುರುಬ ಸಮಾಜದ ಹಿರಿಯರು ಎಂ.ಎಚ್ ಹಾಲಣ್ಣವರ, ಉಪಾಧ್ಯಕ್ಷರಾದ ಸಂತೋಷ್ ನಾಯ್ಕೋಡಿ,ಬಿ.ಕೆ. ಬಿರಾದಾರ, ಬಿ.ಎಸ್ ಮೇಟಿ, ಮಲಕೇಂದ್ರಗೌಡ ಪಾಟೀಲ್, ಎಸ್ ಎಸ್ ನೆರಬೆಂಚಿ, ಬಸವರಾಜ ಶಿರೋಳ, ಹಣಮಂತ ಮೇಲಿನಮನಿ, ಕೆಂಚಪ್ಪಗೌಡ ಬಿರಾದಾರ, ಎಸ್‌ಟಿ ಪೂಜಾರಿ, ವಕೀಲರು ಲಕ್ಷ್ಮಣ ಮೇಟಿ, ಭೀಮಶೀ ಬಿಳೆಬಾವಿ, ಎಸ್ ಕೆ ಹರನಾಳ ಇದ್ದರು.