Home MYSORE Mysore ಮೈಸೂರಿನಲ್ಲಿ ಮತ್ತೊಂದು ಅಗ್ನಿ ಅವಘಡ; ವಸ್ತುಪ್ರದರ್ಶನ ಆವರಣದಲ್ಲಿ ಬೆಂಕಿ, ಡಾಲಿ ಧನಂಜಯ್ ಮದುವೆ ಸೆಟ್ ಪಕ್ಕದಲ್ಲೇ ಘಟನೆ Mysore ಮೈಸೂರಿನಲ್ಲಿ ಮತ್ತೊಂದು ಅಗ್ನಿ ಅವಘಡ; ವಸ್ತುಪ್ರದರ್ಶನ ಆವರಣದಲ್ಲಿ ಬೆಂಕಿ, ಡಾಲಿ ಧನಂಜಯ್ ಮದುವೆ ಸೆಟ್ ಪಕ್ಕದಲ್ಲೇ ಘಟನೆ By -Bhima Samskruthi February 22, 2025 0 ಮೈಸೂರಿನಲ್ಲಿ ಒಂದೇ ದಿನದೊಳಗೆ ಮತ್ತೊಂದು ಬೆಂಕಿ ಅವಘಡ ಸಂಭವಿಸಿದೆ. ವಸ್ತುಪ್ರದರ್ಶನ ಆವರಣದಲ್ಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಟ ಡಾಲಿ ಧನಂಜಯ್ ಮದುವೆಗೆ ಹಾಕಲಾಗಿದ್ದ ಸೆಟ್ನ ಪಕ್ಕದಲ್ಲೇ ದುರಂತ ಸಂಭವಿಸಿದೆ. ಬೆಂಕಿಯಿಂದಾಗಿ ಆಸುಪಾಸಿನ ಬಡಾವಣೆಗಳಲ್ಲಿ ದಟ್ಟ ಹೊಗೆ ಆವರಿಸಿದೆ. ವಸ್ತು ಪ್ರದರ್ಶನ ಆವರಣದಲ್ಲಿ ಹಾಕಲಾಗಿದ್ದ ತ್ಯಾಜ್ಯಕ್ಕೆ ಬೆಂಕಿ ಬಿದ್ದಿದ್ದು, ಕಿಡಿಗೇಡಿಗಳ ಕೃತ್ಯಕ್ಕೆ ಆವರಣದ ಎರಡು ಮರಗಳು ಕೂಡ ಬೆಂಕಿಗಾಹುತಿಯಾಗಿದೆ. ಥರ್ಮಕೋಲ್ ಸೇರಿದಂತೆ ಹಲವು ತ್ಯಾಜ್ಯಗಳು ಸುಟ್ಟು ಭಸ್ಮವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ.ಇಂದು ಚಾಮುಂಡಿ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಘಟನೆಯಿಂದ ಒಟ್ಟು 35 ಎಕರೆಯಷ್ಟು ಅರಣ್ಯ ನಾಶವಾಗಿದೆ ಎಂದು ಡಿಸಿಎಫ್ ಬಸವರಾಜು ತಿಳಿಸಿದ್ದಾರೆ. ಯಾವುದೇ ಪ್ರಾಣಿ ಪಕ್ಷಿಗಳಿಗೆ ಹಾನಿಯಾಗಿಲ್ಲ. ಕಿಡಿಗೇಡಿಗಳು ಬೆಟ್ಟದ ಒಣಹುಲ್ಲಿಗೆ ಬೆಂಕಿ ಇಟ್ಟಿರುವ ಪರಿಣಾಮ ಬೆಂಕಿ ಆವರಿಸಿಕೊಂಡಿದೆ. ಕಿಡಿಗೇಡಿಗಳ ಪತ್ತೆಗೆ ಟವರ್ ಲೋಕೆಷನ್ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ದನ ಮೇಯಿಸುವವರ ಮೇಲೆ ಅನುಮಾನಗಳಿವೆ. ಅದರ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಮೈಸೂರು ವಲಯದ ಡಿಸಿಎಫ್ ಬಸವರಾಜು ಹೇಳಿದ್ದಾರೆ.ಮೈಸೂರಿನ ವಸ್ತು ಪ್ರದರ್ಶನ ಆವರಣ 83 ಎಕರೆಗಳಷ್ಟು ವ್ಯಾಪಿಸಿದೆ. ಇತ್ತೀಚೆಗಷ್ಟೇ ಇಲ್ಲಿ ಎಕ್ಸಿಬಿಷನ್ ನಡೆದಿತ್ತು. ಆ ವೇಳೆ ಹಾಕಲಾಗಿದ್ದ ಮಳಿಗೆಗಳ ತ್ಯಾಜ್ಯವನ್ನು ಇಲ್ಲಿ ಹಾಕಲಾಗಿದೆ. ಕಸ ವಿಂಗಡಣೆ ಮಾಡಿದ ಬಳಿಕ ಅದನ್ನು ಆಚೆ ಹಾಕುವ ಕೆಲಸ ನಡೆಯಬೇಕಿತ್ತು. ಅಷ್ಟರಲ್ಲೇ ಯಾರೋ ಕಿಡಿಗೇಡಿಗಳು ಕಸಕ್ಕೆ ಬೆಂಕಿ ಹಾಕಿದ್ದಾರೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.ಡಾಲಿ ಧನಂಜಯ ಮದುವೆ ಸೆಟ್ನ ಕಸವನ್ನು ಕೂಡ ಇಲ್ಲಿಯೇ ಹಾಕಲಾಗಿತ್ತು. ಅದನ್ನು ತೆರವು ಮಾಡುವ ಕೆಲಸವೂ ನಡೆಯುತ್ತಿದೆ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಹೇಳಿದ್ದಾರೆ. Tags: MYSORE Facebook Twitter Whatsapp Newer Older