NALATAVAD ಅನುದಾನ ವಿತರಣೆಗೆ ಪ್ರಾಮಾಣಿಕೆ ಪ್ರಯತ್ನ:ವಿಜಯಲಕ್ಷಿ

Bhima Samskruthi
By -
0
ಅನುದಾನ ವಿತರಣೆಗೆ ಪ್ರಾಮಾಣಿಕೆ ಪ್ರಯತ್ನ:ವಿಜಯಲಕ್ಷಿ
 ನಾಲತವಾಡ. ನಮ್ಮೂರಲ್ಲಿ ಅಷ್ಟೇ ಅಲ್ಲ ಇಡೀ ರಾಜ್ಯದಲ್ಲಿರುವ ಸರಕಾರಿ ಶಾಲೆಗಳು ಸರಕಾರದ ಸೌಲಭ್ಯಗಳನ್ನು ಪಡೆದು ಅಭಿವೃದ್ದಿಗೊಳ್ಳಬೇಕು ಎನ್ನುವ ಆಶೆ ನನ್ನದು ಈ ನಿಟ್ಟಿನಲ್ಲಿ ನನ್ನ ವ್ಯಾಪ್ತಿಯ ಸರಕಾರಿ ಶಾಲೆಗಳಿಗೆ ಪ.ಪಂ ಮೂಲಕ ನಿಯಮಾನುಸಾರ ಸಣ್ಣ ಪುಟ್ಟ ಅನುದಾನ ನೀಡೋಣ ಎಂದು ಪ.ಪಂ ಅಧ್ಯಕ್ಷೆ ವಿಜಯಲಕ್ಷಿ ಇಲಕಲ್ ಹೇಳಿದರು.
ಇಲ್ಲಿಯ ಸರಕಾರಿ ಉರ್ದು ಪ್ರೌಢ ಶಾಲೆಯ ಮುಂಭಾಗದಲ್ಲಿ ದಾನಿಗಳು ನೀಡಿದ ಸಹಾಯ ಅಸ್ತದಿಂದ ನಿರ್ಮಿಸಲು ಉದ್ದೇಶಿಸಿದ ಕಾರ್ಯಕ್ರಮದ ವೇದಿಕೆಯ ಕಟ್ಟೆಗೆ ಭೂಮಿ ಪೂಜೆ ಹಾಗೂ ಶುದ್ದ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಶಾಲೆಯಲ್ಲೂ ಯಾವದೇ ಕೊರತೆಗಳು ಕಂಡು ಬರಬಾರದು, ಶಿಕ್ಷಕರೂ ಸಹ ಶಾಲೆಯಲ್ಲಿ ಏನೆಲ್ಲಾ ಅವಶ್ಯಕತೆಗಳಿವೆ ಎನ್ನುವುದನ್ನು ಶಾಸಕರೊಂದು ಸಂಪರ್ಕಿಸಿ ಮಾಹಿತಿ ನೀಡಬೇಕು ನಂತರ ನಾವೂ ಸಹ ಶಾಸಕರೊಂದಿಗೆ ಚರ್ಚಿಸಿ ಮಾರ್ಗದರ್ಶನ ಪಡೆದು ಶಾಲೆಗಳ ಅಭಿವೃದ್ದಿಗೆ ಒತ್ತು ಕೊಡುತ್ತೇವೆ ಎಂದರು.
ಸ್ನೇಹ ಸಮ್ಮೇಳನ: ಇದೇ ವೇಳೆ ಅಂಜುಮನ್ ಶಾದಿ ಮಹಲ್‌ನಲ್ಲಿ 10ನೇ ತರಗತಿ ಮಕ್ಕಳ ಸ್ನೇಹ ಸಮ್ಮೇಳನ ಹಾಗೂ ಬಿಳ್ಕೋಡುವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು ವೇದಿಕೆಯಲ್ಲಿ ಶಾಲಾ ಅಭಿವೃದ್ದಿಗೆ ಸಹಾಯ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ನಂತರ ತಾಳಿಕೋಟಿ ಪಟ್ಟಣದ ಅಂಜುಮನ್ ಪ್ರೌಢ ಶಾಲೆಯ ಮುಖ್ಯಗುರು ಎಂ.ಎA.ಮAದೆವಾಲ, ಪ್ರಾಚರ‍್ಯರಾದ ಜಗದೀಶ ಸಜ್ಜನ ಮಾತನಾಡಿದರು.
ಈ ವೇಳೆ ಎಸ್ಡಿಎಮ್ಸಿ ಅಧ್ಯಕ್ಷರಾದ ಅಬ್ದುಲರಜಾಕ ನಾಡದಾಳ, ಮಹ್ಮದಗೌಸ್ ಸಿಕ್ಕಲಗಾರ, ಅಬ್ದುಲಗನಿ ಖಾಜಿ, ಜಗದೀಶ ಸಜ್ಜನ, ಎ.ಎಚ್.ಖಾಜಿ, ವೀರೇಶ ಬಿರಾದಾರ, ಎಲ್.ಎಚ್.ಅವಟಿ, ಬಿ.ಬಿ.ಪೂಜಾರಿ,ಮೈಬೂಬ ಹವೇಲಿ, ಸಲಿಂ ಕಸ್ಸಾಬ, ಮಾವಿನಬಾವಿ, ಅಮೀರಅಮ್ಜೇಸಾಬ ಮುಲ್ಲಾ, ನಬೀಸಾಬ ಬಿದರಕೋಟಿ, ಮಹ್ಮದಲಿ ಮುಲ್ಲಾ, ಅಯೂಬಸಾಬ ಮುಲ್ಲಾ, ಬರಕರ್‌ಅಲಿ ಸುಲ್ತಾನಪೂರ, ಖಾಜಹುಸೆನ ಖತೀಬ ಹಾಗೂ ಹಾಗೂ ಮಹಿಳಾ ಎಸ್ಡಿಎಮ್ಸಿ ಸದಸ್ಯರಿದ್ದರು.
ವೇದಿಕೆ ನಿರ್ಮಾಣಕ್ಕೆ ಪ.ಪಂ ಅಧ್ಯಕ್ಷೆ ವಿಜಯಲಕ್ಷಿ  ಭೂಮಿ ಪೂಜೆ ನೆರವೇರಿಸಿದರು.
Tags:

Post a Comment

0Comments

Post a Comment (0)