ನಾಲತವಾಡ:- ಉರ್ದು ಮಾದ್ಯಮದಲ್ಲಿ ಶಾಲೆ ಕಲಿತವರಿಗೆ ಸರಕಾರಿ ನೌಕರಿ ಸಿಗುತ್ತಿಲ್ಲ ಎನ್ನುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಸ್ಥಳಿಯ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತು ಸರಕಾರಿ ನೌಕರಿ ಪಡೆದವರಿಗೆ ಮಾಡಿದ ’ಸೇವಾ ರತ್ನ’ ಗೌರವ ಸನ್ಮಾನವೇ ಸಾಕ್ಷಿ ಎಂದು ಪ.ಪಂ ಅಧ್ಯಕ್ಷೆ ವಿಜಯಲಕ್ಷಿ ಇಲಕಲ್ ಹೇಳಿದರು.
ಇಲ್ಲಿಯ ವೀರೇಶ್ವರ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ‘ಸೇವಾ ರತ್ನ’ಗಳ ಗೌರವ ಸನ್ಮಾನ ಹಾಗೂ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಖಾಸಗಿ ಶಾಲೆಗಳಿಗೆ ಮೊರೆ ಹೋಗುತ್ತೀರುವ ಪಾಲಕರು ಹಣ ಎಂಬ ಲಕ್ಷಗಟ್ಟಲೇ ದಂಡ ಕೊಟ್ಟು ಪರೀಕ್ಷೆ ವೇಳೆ ಮತ್ತೆ ನಕಲು ಪೂರೈಸಿ ಹೆಚ್ಚು ಅಂಕಗಳನ್ನು ಪಡೆಯುವಂತೆ ಮಾಡುತ್ತಿದ್ದಾರೆ ಇದು ತಮ್ಮ ಗನಕ್ಕಿರಲಿ ಎಂದರು.
ಮುಖ್ಯಗುರು ಎ.ಎಚ್.ಖಾಜಿ ಮಾತನಾಡಿ ಸರಕಾರಿ ಶಾಲೆಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳ ಸಹಾಯ ಮಾಡುತ್ತಿದ್ದು ತೃಪ್ತಿ ತಂದಿದೆ, ಕಳೆದ ಬಾರೀ ಪ್ರತಿ ಪರೀಕ್ಷಾ ಫಲಿತಾಂಶದಲ್ಲಿ ಸರಕಾರಿ ಶಾಲೆಗಳೇ ಒಂದು ಹೆಜ್ಜೆ ಮುಂದಿಟ್ಟಿವೆ ಎಂದರು.
ವೇದಿಕೆಯಲ್ಲಿ ಪ.ಪಂ ಅಧ್ಯಕ್ಷೆ ವಿಜಯಲಕ್ಷಿ ಇಲಕಲ್, ಉಪಾಧ್ಯಕ್ಷರಾದ ಬಸವರಾಜ ಗಂಗನಗೌಡ್ರ, ಸದಸ್ಯೆ ಬಸೀರಾಬೇಗಂ ಮೂಲಿಮನಿ, ಶಿಕ್ಷಣ ಸಂಯೋಜಕ ಬಗಲಿ, ಅಂಜುಮನ್ ಕಮೀಟಿ ಅಧ್ಯಕ್ಷ ಎಲ್.ಎಚ್.ಅವಟಿ, ಎಸ್ಡಿಎಂಸಿ ಅಧ್ಯಕ್ಷ ಅಲ್ತಾಪ ಹುಸೇನ ಕೊಣ್ಣೂರ, ಉಪಾಧ್ಯಕ್ಷೆ ಸ್ವಾಲೇಹಾಬೇಗಂ ಮುಲ್ಲಾ ಮುಖಂಡರಾದ ಅಬ್ದುಲಗನಿಸಾಬ ಖಾಜಿ, ಇಬ್ರಾಯಿಂ ಮುಲ್ಲಾ, ದಾವಲಸಾಬ ಸುಲ್ತಾನಪೂರ, ಚಾಂದಸಾಬ ಹಳ್ಳೂರ, ಬಾಷೇಸಾಬ ತೆಗ್ಗಿನಮನಿ, ಉಮರಸಾಬ ಕಸ್ಸಾಬ,ಪ್ರಾಚರ‍್ಯರಾದ ಜಗದೀಶ ಸಜ್ಜನ, ಮುನ್ನಾ ಚೌಧ್ರಿ, ಸಲೀಮ ಕಸ್ಸಾಬ ಹಾಗೂ ಎಸ್ಡಿಎಮ್ಸಿ ಸದಸ್ಯರಿದ್ದರು.