ನಾಲತವಾಡ. :- ಕಾಂಗ್ರೇಸ್ ಸರಕಾರದ ಜನಪರ ಕಾಳಜಿ ಉಚಿತ ಗ್ಯಾರಂಟಿ ಯೋಜನೆಗಳು ಈಗಾಗಲೇ ಪರಿಣಾಮಕಾರಿ ಯಶಸ್ವಿಯಾಗಿವೆ, ಮತ್ತಷ್ಟು ಪರಿಣಾಮಕಾರಿ ಸಮರ್ಪಕ ಮಾಹಿತಿಗಳು ಜನರ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಸಂಭAದಿಸಿದ ಇಲಾಖೆಯ ಅಧಿಕಾರಿಗಳು ಆಯಾ ಸ್ಥಳಿಯ ಗ್ರಾ.ಪಂ ಪ.ಪಂ ಕಚೇರಿಯಲ್ಲಿ ಪ್ರಚಾರದ ಬ್ಯಾನರ್‌ಗಳಲ್ಲಿ ಅಳವಡಿಸಬೇಕು ಎಂದು ಪಂಚ ಗ್ಯಾರಂಟಿ ಯೋಜನೆಗಳ ತಾಲೂಕಾಧ್ಯಕ್ಷರಾದ ಶಿವಶಂಕರಗೌಡ ಹಿರೇಗೌಡ ಹೇಳಿದರು.
ಇಲ್ಲಿಯ ಪ.ಪಂ ಕಾರ್ಯಾಲಯದಲ್ಲಿ ಪಂಚ ಗ್ಯಾರಂಟಿಗಳ ಕುರಿತು ಕರೆಯಲಾದ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಹಲಕ್ಷ್ಮಿ ಯೋಜನೆಯಡಿ ೪೦ ಸಾವೀರ ಮಹಿಳೆಯರಿಗೆ ಜನೇವರಿ ವರೆಗೆ ಒಟ್ಟು ೮.೪ ಕೋಟಿ ರೂಗಳನ್ನು ಸರಕಾರ ಪಾವತಿಸಿದೆ, ಶಕ್ತಿ ಯೋಜನೆಯಡಿ ಮುದ್ದೇಬಿಹಾಳ ಸಾರಿಗೆ ಘಟಕದಿಂದ ಯೋಜನೆ ಆರಂಭಗೊAಡ ನಂತರ ಪ್ರಸ್ತುತ ಫೆ.೨೬ ೨೦೨೫ ರವರೆಗೆ ೧,೮೦,೩೫೧೪೧ ಮಹಿಳೆಯರು ಸಂಚರಿಸಿದ್ದು ೬೮,೬೦,೨೦೧೬ ಕೋಟಿ ಸರಕಾರ ಖರ್ಚು ಮಾಡಿದೆ, ಉಚಿತ ವಿದ್ಯುತ್ ಯೋಜನೆಯಡಿ ಗ್ರಹ ಜ್ಯೋತಿಯ ನಾಲತವಾಡ ವ್ಯಾಪ್ತಿಯಲ್ಲಿ ಒಟ್ಟು ೯೦೩೬ ಗ್ರಾಹಕರ ಪೈಕಿ, ೮.೮೩೮ ಗ್ರಹ ಜ್ಯೋತಿಯ ಕುಟುಂಬಗಳೂ ಸದುಪಯೋಗ ಪಡೆದುಕೊಂಡಿದ್ದು, ೨೦೦ ಉಚಿತ ಯುನಿಟ್‌ಗಳನ್ನು ೦.೨೭ ಲಕ್ಷ ಬಿಡುಗಡೆಯಾಗಿದೆ. ಯುವನಿಧಿ ಯೋಜನೆಯಡಿ ಈವರೆಗೆ ೧೩೭೪ ಯುವಕರು ನೋಂದಣೆ ಮಾಡಿದ್ದು ೮೧೫ ಫಲಾನುಭವಿಗಳು ಅರ್ಹತೆ ಪಡೆದುಕೊಂಡಿದ್ದಾರೆ ಪದವಿಧರರಿಗೆ ೧.೨೭.೪೭,೦೦೦ ಹಣ ಜಮೆ ಮಾಡಲಾಗಿದೆ, ಡಿಪ್ಲೋಮಾ ವಿಭಾಗದ ೨೦ ಪದವಿಧರರಿಗೆ ಜನೇವರಿವರೆಗೆ ೮೫,೫೦೦ ಲಕ್ಷ ಒಟ್ಟು ೧.೨೮.೩೨.೫೦೦ ರೂಗಳನ್ನು ಜಮೆ ಮಾಡಲಾಗಿದೆ, ಉಚಿತ ೫ ಕೆಜಿ ಅಕ್ಕಿಯ ೧೭೦ ರೂಗಳಂತೆ ಪ್ರತಿ ಫಲಾನುಭವಿಗೆ ಜನೇವರಿವರೆಗೆ ಸುಮಾರು ೧೨.೭೮.೧೧೧೦ ಹಣ ಜಮೆ ಮಾಡಲಾಗಿದೆ ಎಂದರು.
ಈ ವೇಳೆ ಪ.ಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಇಲಕಲ್ ಮಾತನಾಡಿ ಇನ್ನೂ ಹಲವು ಕುಟುಂಬಗಳು ಉಚಿತ ಯೋಜನೆಗಳಿಂದ ವಂಚಿತಗೊOಡಿದ್ದು ಅಂತಹ ಕುಟುಂಬಗಳನ್ನು ಸಂಭoದಿಸಿದ ಇಲಾಖೆಯವರು ಗುರುತಿಸಿ ಉಂಟಾದ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.
ಗ್ಯಾರAಟಿ ಯೋಜನೆಯ ಸದಸ್ಯರಾದ ಬುಡ್ಡೇಸಾ ಚಪ್ಪರಬಂದ ಮಾತನಾಡಿ ಇಲಾಖೆಯ ಹಲವು ಅಧಿಕಾರಿಗಳು ಈವರೆಗೂ ಶಾಸಕರ, ಸಚಿವರ ಸಿಎಂ ಡಿಸಿಎಂ ಅವರ ಭಾವಚಿತ್ರಗಳನ್ನು ಮುದ್ರಿಸಿ ಮಾಹಿತಿ ಫಲಕ ಅಳವಡಿಸುತ್ತಿಲ್ಲ ಶೀಘ್ರವೇ ಬ್ಯಾನರ್‌ಗಳನ್ನು ಅಳವಡಿಸಬೇಕು ಎಂದರು.
ಈ ವೇಳೆ ಪ.ಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಇಲಕಲ್, ಬಸವರಾಜ ಗಂಗನಗೌಡ್ರ, ಅನುಷ್ಠಾನ ಸಮೀತಿಯ ಅಧ್ಯಕ್ಷರಾದ ಶಿವಶಂಕರಗೌಡ ಹಿರೇಗೌಡ, ಸಾರಿಗೆ ಘಟಕ ವ್ಯವಸ್ಥಾಪಕರಾದ ಅಬುಬಕರ್ ಮದಭಾವಿ, ಲಕ್ಷö್ಮಣ ಚವ್ವಾಣ, ಹುಸೇನಬಾಶಾ ಸಾಲಿಮನಿ, ಯಲ್ಲಪ್ಪ ವಿಜಯಕರ, ರಾಮಣ್ಣ ರಾಜನಾಳ, ಸಂಗಣ್ಣ ಚಲವಾದಿ, ಸರಸ್ವತಿ ಪೀರಾಪೂರ, ಸುಜಾತಾ ಸಿಂಧೆ, ಗುರುರಾಜ ಬಿರಾದಾರ, ಎಚ್.ಟಿ.ಕುರಿ, ಬಸವರಾಜ ಚಿನಿವಾಲರ, ರಮೇಶ ಆಲಕೊಪ್ಪರ, ಬುಡ್ಡೇಸಾ ಚಪ್ಪರಬಂದ, ಸಂಗಣ್ಣ ಮೇಲಿನಮನಿ, ರಾಜು ನಾಯಕ, ಬಸವರಾಜ ತಾಳಿಕೋಟಿ, ಅಧಿಕಾರಿಗಳಾದ ಸಿಡಿಪಿಓ ಶಿವಮೂರ್ತಿ ಕುಂಬಾರ, ಸಿಓ ಈರಣ್ಣ ಕೊಣ್ಣೂರ, ಅಮರಪ್ಪ ಸಿರಿ, ಶಿವಪುತ್ರಪ್ಪ ಗುರಿಕಾರ ಹಾಗೂ ಆಹಾರ , ಉದ್ಯೋಗ ವಿನಿಮಯ, ಹೆಸ್ಕಾಂ ಅಧಿಕಾರಿಗಳು ಸೇರಿದಂತೆ ಅಧಿಕಾರಿಗಳಿದ್ದರು.