ನಾಲತವಾಡ:- ಪಟ್ಟಣದಿಂದ ನೂತನ ಹುಬ್ಬಳ್ಳಿ ಸಾರಿಗೆ ಬಸ್ ಸಂಚಾರಕ್ಕೆ ಶನಿವಾರ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗಿದೆ.
ಇಲಕಲ್ ಘಟಕದ ಸಾರಿಗೆ ಬಸ್ ಆರಂಭಗೊAಡಿದ್ದು ನಾಲತವಾಡದಿಂದ ಬೆಳಿಗ್ಗೆ ೫.೪೫ ಹೊರಟು ಮುದ್ದೇಬಿಹಾಳಕ್ಕೆ ೬.೧೫ ತಲುಪುವುದು, ಇಲಕಲ್ ಗದಗ ಗಜೇಂದ್ರಗಡ ಮಾರ್ಗದಿಂದ ಮದ್ಯಾಹ್ನ ೧೨ ಗಂಟೆಗೆ ಹುಬ್ಬಳ್ಳಿ ತಲುಪುವುದು, ನಂತರ ಹುಬ್ಬಳ್ಳಿಯಿಂದ ಮದ್ಯಾಹ್ನ ೨ ಗಂಟೆಗೆ ಬಿಡುವ ಬಸ್ ರಾತ್ರಿ ೮ ಗಂಟೆಗೆ ನಾಲತವಾಡ ತಲುಪುತ್ತದೆ. ಈ ವೇಳೆ ಬಸ್ ಆರಂಭಿಸಲು ಶ್ರಮಪಟ್ಟ ನಿವೃತ್ತ ಸಾರಿಗೆ ನೌಕರರಾದ ಶಿಪುತ್ರಯ್ಯ ಸ್ಥಾವರಮಠ, ಸಂಗಮೇಶಗೌಡ ಪಾಟೀಲ, ಸಾರಿಗೆ ನಿಯಂತ್ರಕ ಆದಪ್ಪ ಗಂಗನಗೌಡ್ರ, ಶಂಕ್ರಣ್ಣ ಜಾಲವಾದಿ, ಶರಣಪ್ಪ ಗಂಗನಗೌಡ್ರ, ಅಶೋಕ ಇಲಕಲ್, ಚನ್ನಪ್ಪಗೌಡ ಹಂಪನಗೌಡ, ಸುರೇಶ ದಡ್ಡಿ ಸೇರಿದಂತೆ ಹಲವರಿದ್ದರು.
ಒತ್ತಾಯ: ಮುದ್ದೇಬಿಹಾಳದಿದ ರಾತ್ರಿ ೯.೩೦ ರ ನಂತರ ಬಸ್‌ಗಳ ಸೇವೆ ಇಲ್ಲದ ಪರಿಣಾಮ ಪ್ರಯಾಣಿಕರು ಪರದಾಡುವಂತಾಗಿದೆ, ಸಾಕಷ್ಟು ಬಾರಿ ಘಟಕ ವ್ಯವಸ್ಥಾಪಕರಿಗೆ ಮನವಿ ಮಾಡಿಕೊಂಡಿದ್ದು, ಶೀಘ್ರವೇ ರಾತ್ರಿ ಮುದ್ದೇಬಿಹಾಳದಿಂದ ನಾಲತವಾಡ ಮಾರ್ಗವಾಗಿ ರಾಯಚೂರ ಬಸ್ ಪುನಃ ಆರಂಭಿಸಬೇಕು ಎಂದು ಇದೇ ವೇಳೆ ಸಾರ್ವಜನೀಕರು ಒತ್ತಾಯಿಸಿದರು.