ʼಏನ್ ಸಾಧನೆ ಮಾಡಿದ್ದೀರಿ ಅಂತ ಸಂದರ್ಶನ ಕೊಡ್ತೀರಿ?ʼ- ಖಡಕ್ ಉತ್ತರ ಕೊಟ್ಟ ಕಿಚ್ಚ ಸುದೀಪ್ ಮಗಳು ಸಾನ್ವಿ!

ಇತ್ತೀಚೆಗೆ ʼಸರಿಗಮಪʼ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಸಾನ್ವಿ ಸುದೀಪ್ ಅವರು ಕನ್ನಡ ಹಾಡು ಹಾಡಿ, ಇಂಗ್ಲಿಷ್‌ನಲ್ಲಿ ಸಂವಹನ ನಡೆಸಿದರು. ಆಗಲೂ ಅನೇಕರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಈಗ ಇಂಗ್ಲಿಷ್ ಪಾಡ್‌ಕಾಸ್ಟ್‌ವೊಂದರಲ್ಲಿ ಸಾನ್ವಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆಯೂ ಕೆಲವರು ಕೊಂಕು ನುಡಿದಿದ್ದಾರೆ. ಈಗ ಸಾನ್ವಿ ಸುದೀಪ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಯಾವ ಭಾಷೆಯಲ್ಲಿ ಸಂದರ್ಶನ ಮಾಡ್ತಾರೆ ಎನ್ನೋದು ನಿರೂಪಕರಿಗೆ ಬಿಟ್ಟಿದ್ದು…!
“ಜಿನಲ್ ಮೋದಿ ಜೊತೆಗಿನ ಸಂದರ್ಶನದ ಬಗ್ಗೆ ನಾನು ಕೆಲ ವಿಷಯಗಳನ್ನು ಹೇಳಬೇಕಿದೆ. ಇಂಗ್ಲಿಷ್ ಪಾಡ್‌ಕಾಸ್ಟ್‌ನ್ನು ಇಂಗ್ಲಿಷ್‌ನಲ್ಲಿಯೇ ಮಾಡಲಾಗಿದೆ. ಇಂಗ್ಲಿಷ್ ಅರ್ಥ ಆಗದಿದ್ದವರ ಬಳಿ ಕ್ಷಮೆ ಕೇಳ್ತೀನಿ, ಕೆಲವರಿಗೆ ಕನ್ನಡವೂ ಅರ್ಥ ಆಗೋದಿಲ್ಲ. ಸಂದರ್ಶನ ಮಾಡುವವರು ಯಾವ ಭಾಷೆಯಲ್ಲಿ ಪ್ರಶ್ನೆ ಕೇಳ್ತಾರೆ ಎನ್ನೋದಕ್ಕೆ ಗಮನಕೊಡೋಣ, ಅವರ ಚಾನೆಲ್, ಅವರ ಭಾಷೆ” ಎಂದು ಸಾನ್ವಿ ಸುದೀಪ್ ಅವರು ಹೇಳಿದ್ದಾರೆ.