Big News ಬೆಂಗಳೂರು ಪೊಲೀಸ್​ ಆಯುಕ್ತರನ್ನೇ ಬಿಡದ ಸೈಬರ್​ ಖದೀಮರು: ಬಿ ದಯಾನಂದ ಹೆಸರಲ್ಲಿ ನಕಲಿ ಖಾತೆ

Bhima Samskruthi
By -
0

ಬೆಂಗಳೂರು: ಸರ್ಕಾರಿ ಅಧಿಕಾರಿಗಳಂತೆ ನಟಿಸಿ ನಿಮ್ಮನ್ನು ಯಾಮಾರಿಸಬಹುದು. ಹಾಗಾಗಿ ಎಚ್ಚರವಾಗಿರುವಂತೆ ಇತ್ತೀಚೆಗೆ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ಅವರು ಹೆಚ್ಚುತ್ತಿರುವ ಸೈಬರ್ ಅಪರಾಧದ (Cyber ​​crime) ಬಗ್ಗೆ ಕಿವಿಮಾತು ಹೇಳಿದ್ದರು. ಆದರೆ ಇದೀಗ ಸೈಬರ್​ ಖದೀಮರು ಅವರನ್ನು ಬಿಟ್ಟಿಲ್ಲ. ಫೇಸ್​ಬುಕ್​ನಲ್ಲಿ ಬಿ.ದಯಾನಂದ ಹೆಸರಿನಲ್ಲಿ ಫೇಕ್ ಅಕೌಂಟ್ ಓಪನ್​ ಮಾಡಿರುವ ವಂಚಕರು ಜನರಿಗೆ ರಿಕ್ವೆಸ್ಟ್ ಕಳಿಸುತ್ತಿರುವ ಘಟನೆಯೊಂದು ನಡೆದಿದೆ.

ಹೌದು! ಸೈಬರ್​ ಖದೀಮರು ಬೆಂಗಳೂರು ಪೊಲೀಸ್​ ಆಯುಕ್ತರನ್ನು ಬಿಟ್ಟಿಲ್ಲ. ಫೇಸ್​ಬುಕ್​ನಲ್ಲಿ ಬಿ.ದಯಾನಂದ ಹೆಸರಿನಲ್ಲಿ ನಕಲಿ ಖಾತೆ ತೆರಿದ್ದಾರೆ. ಹಿಂದಿ ಭಾಷೆಯಲ್ಲಿ ಅಕೌಂಟ್ ಓಪನ್ ಮಾಡಿರುವ ಖದೀಮರು ಜನರಿಗೆ ರಿಕ್ವೆಸ್ಟ್ ಕಳಿಸುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್​ ಆಗಿದೆ.

ಬಿ.ದಯಾನಂದ್‌ ಹೆಸರಲ್ಲಿ ನಕಲಿ ವಾಟ್ಸ್‌ಆ್ಯಪ್‌ ಖಾತೆ
ಇತ್ತೀಚೆಗೆ ಕೂಡ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಅವರ ಹೆಸರಿನಲ್ಲೇ ನಕಲಿ ವಾಟ್ಸ್‌ಆ್ಯಪ್‌ ಖಾತೆ ತೆರೆದಿದ್ದ ಖದೀಮರು ವಂಚನೆಗೆ ಮುಂದಾಗಿದ್ದರು. ನಕಲಿ ವಾಟ್ಸ್‌ಆ್ಯಪ್‌ ಖಾತೆ ತೆರೆದಿದ್ದ ಖದೀಮರು ಪೊಲೀಸ್‌ ಕಮಿಷನರ್‌ ಪೋಟೋವನ್ನು ವಾಟ್ಸ್‌ ಆ್ಯಪ್​ ಡಿಪಿಗೆ ಹಾಕಿದ್ದರು.

ಬಳಿಕ ನಾನು ಬಿ.ದಯಾನಂದ್‌, ಬೆಂಗಳೂರು ಪೊಲೀಸ್‌ ಕಮಿಷನರ್‌ ಎಂದು ಆಪ್ತರಿಗೆ, ಸಾರ್ವಜನಿಕರಿಗೆ, ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಹಲವು ಜನರಿಗೆ ಮೆಸೇಜ್​ ಕಳುಹಿಸಲಾಗಿತ್ತು. ಆ ಮೂಲಕ ಕಮಿಷನರ್‌ ಹೆಸರಲ್ಲಿ ಹಣ ವಸೂಲಿಗೆ ಮುಂದಾಗಿದ್ದರು ಎಂದು ಶಂಕಿಸಲಾಗಿತ್ತು. ಬಳಿಕ ಈ ವಿಚಾರ ಸೈಬರ್‌ ಕ್ರೈಂ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ನಕಲಿ ಖಾತೆಯನ್ನು ಡಿ-ಆಕ್ಟಿವೇಟ್‌ ಮಾಡಲಾಗಿತ್ತು. ಸೈಬರ್‌ ಕ್ರೈಂ ಪೊಲೀಸರಿಂದ ಆರೋಪಿಗಾಗಿ ಶೋಧ ನಡೆದಿತ್ತು.

ಕರ್ನಾಟಕದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಆಯುಕ್ತ ಬಿ ದಯಾನಂದ ಹೇಳಿದ್ದರು. ಸರ್ಕಾರಿ ಅಧಿಕಾರಿಗಳಂತೆ ನಟಿಸಿ ನಿಮ್ಮನ್ನು ಯಾಮಾರಿಸಬಹುದು. ಹಣಕ್ಕೆ ಬೇಡಿಕೆ ಇಡಬಹುದು. ಹಾಗಾಗಿ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದರು.

ಡಿಜಿಟಲ್ ಅರೆಸ್ಟ್​ ಎಂಬ ಪರಿಕಲ್ಪನೆಯೂ ಭಾರತೀಯ ಕಾನೂನು ಅಥವಾ ಸಂವಿಧಾನದಲ್ಲಿ ಅಸ್ತಿತ್ವದಲ್ಲಿಲ್ಲ ಎಂದು ಆಯುಕ್ತ ದಯಾನಂದ ಸ್ಪಷ್ಟಪಡಿಸಿದರು. ಪೊಲೀಸ್ ಕ್ರಮಗಳನ್ನು ಕಾನೂನುಗಳಿಂದ ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತದೆ. ನೋಟಿಸ್ ಅಥವಾ ದೈಹಿಕವಾಗಿ ಮಾತ್ರ ಬಂಧಿಸಿಲಾಗುತ್ತದೆ. ನಂತರ 24 ಗಂಟೆಗಳ ಒಳಗೆ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರು.


Post a Comment

0Comments

Post a Comment (0)